ಚೆನ್ನೈ(ತಮಿಳುನಾಡು):ಕಾಲಿವುಡ್ನ ಸೂಪರ್ಸ್ಟಾರ್, ದಳಪತಿ ವಿಜಯ್ಗೆ ಮದ್ರಾಸ್ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಆ ದಂಡದ ಮೊತ್ತವನ್ನು ತಮಿಳುನಾಡು ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡಬೇಕೆಂದು ಆದೇಶಿಸಿದೆ.
ವಿಜಯ್ಗೆ ಮೊದಲಿನಿಂದ ಕಾರುಗಳ ಮೇಲೆ ಕ್ರೇಜ್ ಹೆಚ್ಚಿದ್ದು, ಈಗಾಗಲೇ ವಿಜಯ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಹೊಸದಾಗಿ ಕೊಂಡುಕೊಂಡ ಐಷಾರಾಮಿ ಇಂಪೋರ್ಟೆಡ್ ಕಾರು ವಿಚಾರಕ್ಕೆ ಮದ್ರಾಸ್ ಹೈಕೋರ್ಟ್ ದಂಡ ವಿಧಿಸಿದೆ.
2012ರಲ್ಲಿ ವಿಜಯ್ ರೋಲ್ಸ್ ರೋಯ್ಸ್ ಕಾರನ್ನು ವಿದೇಶದಿಂದ ಕೊಂಡುಕೊಂಡಿದ್ದು, ಎಂಟ್ರಿ ಟ್ಯಾಕ್ಸ್ಗೆ ವಿನಾಯಿತಿಯನ್ನು ಕೋರಿದ್ದರು. ಆದರೆ ತೆರಿಗೆ ವಿನಾಯಿತಿ ನೀಡಲು ಇಲಾಖೆ ನಿರಾಕರಿಸಿತ್ತು. ನಂತರ ತೆರಿಗೆ ವಿನಾಯಿತಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು.