ಲಕ್ನೋ: ಬಾಲಿವುಡ್ನ ಖ್ಯಾತ ಸಿಂಗರ್ ಕನಿಕಾ ಕಪೂರ್ಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದ್ದು, ತಮಗೆ ವೈರಸ್ ಇರುವುದು ಗೊತ್ತಾದ ಬಳಿಕ ಕೂಡ ತಾಜ್ ಹೋಟೆಲ್ನಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಅವರ ವಿರುದ್ಧ ದೂರು ದಾಖಲಾಗಿದೆ.
ಗಾಯಕಿ ಕನಿಕಾ ಕಪೂರ್ಗೆ ಕೊರೊನಾ ವಿದೇಶದಲ್ಲಿ ನೆಲೆಸಿರುವ ಇವರು, ಕಳೆದ ಕೆಲ ದಿನಗಳ ಹಿಂದೆ ವೈಯಕ್ತಿಕ ಕೆಲಸಕ್ಕಾಗಿ ತಮ್ಮ ಊರಾದ ಲಕ್ನೋಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಕೆಮ್ಮು-ಜ್ವರ ಕಾಣಿಸಿಕೊಂಡಿದ್ದರಿಂದ ಪರೀಕ್ಷೆಗೆ ಒಳಪಡಸಿದಾಗ ಕೊರೊನಾ ಸೋಂಕು ಪತ್ತೆಯಾಗಿತ್ತು.
ಇದರ ಬೆನ್ನಲ್ಲೇ ಅವರು ಎರಡು ಪಾರ್ಟಿಗಳಲ್ಲಿ ಭಾಗಿಯಾಗಿದ್ದು, ಅನೇಕರೊಂದಿಗೆ ಮಾತುಕತೆ ಸಹ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕೊರೊನಾ ವೈರಸ್ ಇರುವುದು ಪತ್ತೆಯಾಗಿದ್ದರೂ ಬೇಜವಾಬ್ದಾರಿ ನಡೆಯಿಂದ ಪಾರ್ಟಿಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಇವರ ವಿರುದ್ಧ ಸೆಕ್ಷನ್ 182,269,270 ಅಡಿ ದೂರು ದಾಖಲಾಗಿದ್ದು, ಇದೀಗ ಲಕ್ನೋದಲ್ಲಿರುವ ಸಂಜಯ್ ಗಾಂಧಿ ಪೋಸ್ಟ್ ಗ್ರ್ಯಾಜ್ಯುವೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾರ್ಚ್ 9ರಂದು ಲಂಡಡ್ನಿಂದ ಮುಂಬೈಗೆ ಆಗಮಿಸಿದ್ದ ಇವರು ಏರ್ಪೋರ್ಟ್ನಲ್ಲಿ ಸ್ಕ್ರೀನಿಂಗ್ನಿಂಧ ತಪ್ಪಿಸಿಕೊಳ್ಳಲು ತಮ್ಮ ಪ್ರವಾಸದ ಹಿಸ್ಟರಿ ಮುಚ್ಚಿಟ್ಟಿದ್ದರು ಎಂದು ತಿಳಿದು ಬಂದಿದೆ. ಕನಿಕಾ ಕಪೂರ್ ಮಾರ್ಚ್ 13 ಮತ್ತು 14ರಂದು ಎರಡು ಪ್ರತ್ಯೇಕ ಪಾರ್ಟಿಗಳಲ್ಲಿ ಭಾಗವಹಿಸುತ್ತಾರೆ. ಮಾರ್ಚ್ 15ರಂದು ಕನಿಕಾ ಭಾಗವಹಿಸಿದ್ದ ಪಾರ್ಟಿಯಲ್ಲಿ ವಸುಂಧರಾ ರಾಜೆ, ದುಷ್ಯಂತ್ ಸಿಂಗ್, ಉತ್ತರ ಪ್ರದೇಶದ ಆರೋಗ್ಯ ಸಚಿವ ಸೇರಿದಂತೆ ರಾಜಕಾರಣಿಗಳು ಮತ್ತು ಹೈಪ್ರೊಫೈಲ್ ವ್ಯಕ್ತಿಗಳು ಸಹ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಮಾರ್ಚ್ 18ರಂದು ಕನಿಕಾ ಅವರಿಗೆ ಅಲ್ಪ ಪ್ರಮಾಣದ ಜ್ವರ ಕಾಣಿಸಿಕೊಂಡಿದ್ದು ಕಿಂಗ್ಸ್ ಜಾರ್ಜ್ಸ್ ಮೆಡಿಕಲ್ ವಿಶ್ವವಿದ್ಯಾನಿಲಯದಲ್ಲಿ ಚಿಕಿತ್ಸೆಗಾಗಿ ದಾಖಲಾಗುತ್ತಾಳೆ. ಮಾರ್ಚ್ 20ರಂದು ಈಕೆಯಲ್ಲಿ ಕೋವಿಡ್ 19 ವೈರಸ್ ಲಕ್ಷಣಗಳು ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ಕನಿಕಾ ಅವರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.