ಬೆಂಗಳೂರು : ಸುಪ್ರಸಿದ್ಧ ಕವಿ, ಕನ್ನಡ ಸಿನಿಮಾಕ್ಕೂ ನಂಟು ಹೊಂದಿರುವ ಡಾ .ಬಿ. ಆರ್. ಲಕ್ಷ್ಮಣ್ ರಾವ್ ಅವರು ಮೊದಲ ಬಾರಿಗೆ ಸವಿಸ್ತಾರವಾಗಿ ತಮಗೆ ಬರುತ್ತಿದ್ದ ಸಂಭಾವನೆಯ ಬಗ್ಗೆ ಫೇಸ್ ಬುಕ್ನಲ್ಲಿ ಮಾತನಾಡಿದ್ದಾರೆ.
ಕಳೆದ 55 ವರ್ಷಗಳಿಂದ ಕವಿತೆಯನ್ನು ಬರೆಯುತ್ತಾ ಬಂದಿರುವ ಬಿಆರ್ಎಲ್ ಎಂದೇ ಪ್ರಸಿದ್ಧಿ ಪಡೆದಿರುವ ಅವರು, 1970 ರಲ್ಲಿ10 ರೂಪಾಯಿ ಸಂಭಾವನೆಯನ್ನು ‘ಗೋಕುಲ’ ಪತ್ರಿಕೆಯಿಂದ ಪಡೆದಿದ್ದನ್ನು ಜ್ಞಾಪಿಸಿಕೊಂಡರು. ನಂತರ ಪ್ರಜಾವಾಣಿ ಪತ್ರಿಕೆಯಿಂದ ಕವಿತೆಯೊಂದಕ್ಕೆ 25 ರೂಪಾಯಿ. ಅದು ಮುಂದಿನ ದಿನಗಳಲ್ಲಿ ಸಾವಿರ ವರೆಗೂ ಹೋಗಿತ್ತು, ಹಾಗೂ ಸಿನಿಮಾ ಹಾಡು ಬಳಕೆ ಮಾಡಿದ್ದಕ್ಕೆ 50,000 ರೂಪಾಯಿ ವರೆಗೂ ಪಡೆದಿದ್ದಾಗಿ ತಿಳಿಸಿದ್ದಾರೆ.
ಬಿಆರ್ಎಲ್ ಹಾಗೂ ಡಾ. ಎಚ್ಎಸ್ವಿ ಸೇರಿ ಆಕಾಶ ವಾಣಿಯಲ್ಲಿ ನಿಲಯದ ಕಲಾವಿದರ ಪಟ್ಟಿಗೆ ಸೇರಿಕೊಂಡಾಗ 20 ರಿಂದ 25 ಕವಿತೆಗಳ ಪುಸ್ತಕವನ್ನು ಪ್ರಕಟ ಮಾಡಿದ್ದು, ಒಂದು ಹಂತ ಎನ್ನುತ್ತಾರೆ. ಆಕಾಶವಾಣಿಯಲ್ಲಿ ಬಿಆರ್ಎಲ್ ಅವರ ಒಂದು ಭಾವ ಗೀತೆ ಪ್ರಸಾರ ಮಾಡಿದರೆ ಒಂದು ಬಾರಿ ಪ್ರಸಾರಕ್ಕೆ ಒಂದು ರೂಪಾಯಿ ಅಂತೆ ವರ್ಷದ ಕಡೆಯಲ್ಲಿ 15,000 ದಿಂದ 20000 ರೂಪಾಯಿ ಬರುತ್ತಿತ್ತಂತೆ. ಐಪಿಆರ್ಎಸ್ನಿಂದ ಸಹ ವರ್ಷದ ಕೊನೆಯಲ್ಲಿ ಹಣ ಜಮೆ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.