ಕನ್ನಡ ಚಿತ್ರ ರಂಗದಲ್ಲಿ ಅಂದಿನ ಕಾಲದ ಹೊನ್ನಪ್ಪ ಭಾಗವತರ್ ಅವರ ‘ಕ್ರಾಂತಿ ಯೋಗಿ ಬಸವಣ್ಣ’ ಸಿನಿಮಾದಿಂದ ಹಿಡಿದು 2014ರ ವರೆಗೂ 12 ನೇ ಶತಮಾನದ ದಾರ್ಶನಿಕ ಶ್ರೀ ಬಸವವೇಶ್ವರ ಬಗ್ಗೆ ಸಿನಿಮಗಳು ಬಂದು ಹೋಗಿವೆ.
ಶ್ರೀ ಬಸವೇಶ್ವರ ಪಾತ್ರ ಬಹಳ ಅಚ್ಚುಕಟ್ಟಾಗಿ ಹೊಂದಿಕೊಂಡಿದ್ದು ಶ್ರೀ ಹೊನ್ನಪ್ಪ ಭಾಗವತರ್, ಅಶೋಕ್, ರಮೇಶ್ ಅರವಿಂದ್, ಟಿ ವಿ ಸೀರಿಯಲ್ನಲ್ಲಿ ಶ್ರೀನಿವಾಸಮೂರ್ತಿ ಅವರಿಗೆ.
ಈ ಟಿವಿಯಲ್ಲಿ ಬರೋಬ್ಬರಿ 102 ಕಂತುಗಳ ಅಣ್ಣ ಬಸವಣ್ಣ ಧಾರಾವಾಹಿ ಪ್ರಸಾರ ಕಂಡಿತು. ಈ ಧಾರಾವಾಹಿಗೆ ಶ್ರೀನಿವಾಸ್ ನಿರ್ದೇಶನ ಮಾಡಿದ್ದು, ಬಸವಣ್ಣನ ಪಾತ್ರದಲ್ಲಿ ಅವರೇ ಕಾಣಿಸಿಕೊಂಡಿದ್ದರು.
ಕನ್ನಡದಲ್ಲಿ ಬಾಲ ಬಸವನ ಸಿನಿಮಾ ಕೂಡ ತೆರಗೆ ಬಂದಿದ್ದು, ಆ ಚಿತ್ರಕ್ಕೆ ಸಿ ಲಕ್ಷ್ಮಣ್ ನಿರ್ದೇಶನ ಮಾಡಿದ್ದರು. ಈ ‘ಕಾರಣಿಕ ಶಿಶು’ ಚಿತ್ರದಲ್ಲಿ ರಮೇಶ್ ಅರವಿಂದ್ ಬಸವೇಶ್ವರನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ಶ್ರೀ ದಾನಮ್ಮ ದೇವಿ ಕನ್ನಡ ಚಿತ್ರದಲ್ಲಿ ನಟ ರಾಮಕೃಷ್ಣ ಸಹ ಶ್ರೀ ಬಸವೇಶ್ವರ ಪಾತ್ರ ಮಾಡಿದ್ದರು.