ಜನಪ್ರಿಯ ನಟ ವಸಿಷ್ಠ ಎನ್ ಸಿಂಹ ಅವರ ವೃತ್ತಿ ಜೀವನದ ಬಹು ನಿರೀಕ್ಷೆಯ ಸಿನಿಮಾ ಈ ‘ಕಾಲಚಕ್ರ’ವಾಗಿದೆ. ಅದಕ್ಕೆ ಕಾರಣ ಅವರು 35 ವರ್ಷ ಹಾಗೂ 65 ವರ್ಷದ ವಯಸ್ಸಿನ ಎರಡು ವಿಭಿನ್ನ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ವಸಿಷ್ಠ ಎನ್ ಸಿಂಹರ ಜನುಮದಿನದಂದು ಕಿಚ್ಚ ಸುದೀಪ್ ‘ಕಾಲಚಕ್ರ’ ಚಿತ್ರದ ಟೀಸರ್ ಬಿಡುಗಡೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದರು . ಈಗ ಸಿನಿಮಾ ಸೆನ್ಸಾರ್ ಮನ್ನಣೆ ಪಡೆಯಲು ಕಾಯುತ್ತಿದೆ.
ಸೆನ್ಸಾರ್ ಮನ್ನಣೆ ಪಡೆಯಲು ಕಾಯುತ್ತಿದೆ ಬಹು ನಿರೀಕ್ಷೆಯ ’ಕಾಲಚಕ್ರ’ - vasishta n simha
ಜನಪ್ರಿಯ ನಟ ವಸಿಷ್ಠ ಎನ್ ಸಿಂಹ ಅವರ ಬಹು ನಿರೀಕ್ಷೆಯ ಕಾಲಚಕ್ರ ಸಿನಿಮಾ ಸೆನ್ಸಾರ್ ಮನ್ನಣೆ ಪಡೆಯಲು ಕಾಯುತ್ತಿದೆ.
100 ಚಿತ್ರಗಳ ಸಂಗೀತ ನಿರ್ದೇಶಕ ಗುರುಕಿರಣ್ ಈ ‘ಕಾಲಚಕ್ರ’ ಸಿನಿಮಾಕ್ಕೆ ಎರಡು ಹಾಡುಗಳಿಗೆ ವಿಭಿನ್ನ ರೀತಿಯ ಸಂಗೀತ ಒದಗಿಸಿದ್ದಾರೆ. ಕವಿರಾಜ್ ಹಾಗೂ ಸಂತೋಷ್ ನಾಯಕ್ ಗೀತ ರಚನೆ ಮಾಡಿದ್ದಾರೆ. ನಿರ್ದೇಶಕ ಹಾಗೂ ನಿರ್ಮಾಪಕ ಸುಮಂತ್ ಕ್ರಾಂತಿ ಈ ‘ಕಾಲ ಚಕ್ರ’ ಸಿನಿಮಾದಲ್ಲಿ ಶಾಂತಿ, ರಾಕ್ಷಸತನ ಮತ್ತು ನೀಚತನದ ಅಂಶಗಳನ್ನು ಕ್ರೋಡೀಕರಿಸಿದರೆ ಏನಾಗಬಹುದು ಎಂದು ಹೇಳಲಾಗಿದೆ ಎಂದಿದ್ದಾರೆ.
ಇನ್ನು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ರಶ್ಮಿ ಫಿಲ್ಮ್ ಬ್ಯಾನರ್ ಅಡಿ ರಶ್ಮಿ ನಿರ್ಮಾಣ ಮಾಡಿರುವ ‘ಕಾಲಚಕ್ರ’ ಸಿನಿಮಾದಲ್ಲಿ ರಕ್ಷ, ದೀಪಕ್ ಶೆಟ್ಟಿ, ಬೇಬಿ ಆವಿಕ ರಾಥೋಡ್ ಹಾಗೂ ಇತರರು ಅಭಿನಯಿಸಿದ್ದಾರೆ. ಇನ್ನು ಬಿ.ಎ ಮಧು ಸಂಭಾಷಣೆ, ಎಲ್.ಎಂ ಸುರೇಶ್ ಛಾಯಾಗ್ರಹಣ, ಗುರುಕಿರಣ್ ಸಂಗೀತ ನೀಡಿದ್ದಾರೆ.