ಬಿಗ್ಬಾಸ್ ಸೀಸನ್ 8ರ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ ಟ್ವಿಟರ್ ನಲ್ಲೂ ಕೂಡ ದಿವ್ಯಾ ಹೆಸರು ಸದ್ದು ಮಾಡಿದೆ.
ಈ ಜೋಡಿಯ ಕೆಮಿಸ್ಟ್ರಿ ನೋಡುವವರಿಗೆ ಇವರು ಪ್ರೇಮಿಗಳು ಎಂದೇ ಅನಿಸುತ್ತದೆ. ದಿವ್ಯಾ ಹಾಗೂ ಅರವಿಂದ್ ಅವರನ್ನು ತಮ್ಮ ಪ್ರೀತಿಯ ಬಗ್ಗೆ
ಕೇಳಿದ್ರೆ ನಾವು ಒಳ್ಳೆಯ ಸ್ನೇಹಿತರು, ಇನ್ನೂ ಪ್ರೀತಿ ಬಗ್ಗೆ ಯೋಚಿಸಿಲ್ಲ ಎಂದು ಹೇಳುತ್ತಾರೆ.
ಬಿಗ್ಬಾಸ್ ಮನೆಯೊಳಗೆ ದಿವ್ಯ ಸಹ ಸ್ಪರ್ಧಿ ಕೆ.ಪಿ. ಅರವಿಂದ್ ಜತೆ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಆದರೆ, ಇದೀಗ ದಿವ್ಯಾ, ಬಿಗ್ಬಾಸ್ ಕನ್ನಡ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಬಿಗ್ ಬಾಸ್ ಮನೆಯ ಸದಸ್ಯರೊಬ್ಬರು ಟ್ವಿಟರ್ ನಲ್ಲಿ ಟ್ರೆಂಡ್ ಆದ ಮೊದಲ ಮಹಿಳಾ ಸ್ಪರ್ಧಿ ಎಂಬ ಹೆಸರು ಪಡೆದುಕೊಂಡಿದ್ದಾರೆ.
21 ಸಾವಿರಕ್ಕೂ ಹೆಚ್ಚು ಟ್ವೀಟ್ಗಳು ದಿವ್ಯಾ ಹೆಸರಿನಲ್ಲಿ ಹರಿದಾಡಿವೆ. ಇದು ಬಿಗ್ಬಾಸ್ ಕನ್ನಡ ಇತಿಹಾಸದಲ್ಲೇ ಇದೇ ಮೊದಲು. ದಿವ್ಯಾ ನೀವು ನಿಜಕ್ಕೂ ಇದಕ್ಕೆ ಅರ್ಹರು. ಬಿಗ್ಬಾಸ್ ಮನೆಯೊಳಗೆ ನೀವು ತುಂಬಾ ಚೆನ್ನಾಗಿ ಕಾಣುವುದರ ಜತೆಯಲ್ಲೇ ಸೊಗಸಾಗಿ ಆಡುತ್ತಿದ್ದೀರಾ ಎಂದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ.
ದಿವ್ಯಾರಿಗೆ ಹೆಚ್ಚು ಆದ್ಯತೆ ನೀಡುವಂತೆ ಕೇಳುತ್ತಿದ್ದಾರೆ. ಅಂದಹಾಗೆ ದಿವ್ಯಾ ಅವರಿಗೆ ಇಷ್ಟೊಂದು ಖ್ಯಾತಿ ಬರಲು ಅರವಿಂದ್ ಕೆ.ಪಿ. ಪ್ರಮುಖರು ಎಂದು ಹೇಳಲಾಗುತ್ತಿದೆ. ಇಬ್ಬರ ಕೆಮಿಸ್ಟ್ರಿ ಮನೆಯಲ್ಲಿ ಚೆನ್ನಾಗಿ ಕೆಲಸ ಮಾಡಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿಯೇ ಟ್ವಿಟರ್ನಲ್ಲಿ #Arviya ಹ್ಯಾಷ್ಟ್ಯಾಗ್ ಕೂಡ ಟ್ರೆಂಡ್ ಆಗಿದೆ.