ಇದಕ್ಕಾಗಿ ಅವರು ನ್ಯೂಟ್ರಿಷಿಯನಿಸ್ಟ್ ಲುಕೆ ಕೌಟಿನ್ಹೋ ಅವರ ಸಹಾಯ ಪಡೆದಿದ್ದಾರಂತೆ. ಅವರು ಈಗಾಗಲೇ ಬಹಳಷ್ಟು ತೂಕವನ್ನ ಕಡಿಮೆ ಮಾಡಿಕೊಂಡಿದ್ದಾರಂತೆ. ಅವರು ಸೈಜ್ ಝಿರೋ ಗೆ ಸಖತ್ ಬೆವರು ಹರಿಸಿದ್ದು ಗೊತ್ತೇ ಇದೆ.
ಹೊಸ ಅವತಾರದಲ್ಲಿ ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ...! ಒಂದು ವರ್ಷ ಅವರು ಕಾಣಿಸಿಕೊಳ್ಳದ್ದು ಈ ಕಾರಣಕ್ಕೇ? - ಬಾಹುಬಲಿ
ಹೈದರಾಬಾದ್; ಬಾಹುಬಲಿ ಚಿತ್ರದ ಬಳಿಕ ಭಾಗಮತಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ ಆ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಏನುಗೊತ್ತಾ... ಯಾವುದೋ ಒಂದು ಸದುದ್ದೇಶಕ್ಕಾಗಿ ಅಂತೆ. ಮುಂದಿನ ತಮ್ಮ ಹೊಸ ಯೋಜನೆಗಾಗಿ ಅನುಷ್ಕಾ ತೆಳ್ಳಗಾಗಿದ್ದಾರಂತೆ.
ವೆರಿ ಇಂಟ್ರೆಸ್ಟಿಂಗ್ ವಿಷಯ ಎಂದರೆ, ನ್ಯೂಟ್ರಿಷಿಯನ್ ಲುಕೆ ಕೌಟಿನ್ಹೋ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಅನುಷ್ಕಾ ಶೆಟ್ಟಿ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದು, ಅವರೊಂದಿಗೆ ಸೇರಿ ನಾವೊಂದು ವಿಶೇಷ ಕೊಡ್ತೇವಿ ಎನ್ನುವ ಮೂಲಕ ಮುಂದಿನ ತಮ್ಮ ಯೋಜನೆ ಬಗ್ಗೆ ಹೇಳಿಕೊಂಡಿದ್ದಾರೆ.
ದೇಶದ ಆರೋಗ್ಯವನ್ನೇ ಬದಲಾವಣೆ ಮಾಡುವ ವಿಷನ್ ಹೊಂದಿದ್ದೇವೆ ಎಂದು ಕೌಟಿನ್ಹೋ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಹೆಲ್ತ್ಕೇರ್ ಬಗ್ಗೆ ಗಮನಹರಿಸುವುದೇ ನಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ ಕೂಡಾ. ಇನ್ನು ವಿಶೇಷ ಎಂದರೆ ಈ ಚಿತ್ರದಲ್ಲಿ ಅನುಷ್ಕಾ ಈ ಹಿಂದಿಗಿಂತ ಬಳಕುವ ಬಳ್ಳಿಯಂತೆ ಕಾಣಿಸುತ್ತಿದ್ದಾರೆ.