ಉತ್ತರಾಖಂಡ್ ಪ್ರವಾಸೋದ್ಯಮದ ಪ್ರಚಾರದ ದೃಷ್ಟಿಯಿಂದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ರಿಯಾಲಿಟಿ ಶೋ ಒಂದನ್ನು ನಡೆಸಲಿದ್ದಾರೆ.
ಹೌದು... ಬಾಲಿವುಡ್ ಬಿಗ್ ಬಿ ಕಳೆದ ದಿನಗಳಲ್ಲಿ ಹಲವಾರು ಸಾರ್ವಜನಿಕ ಒಳಿತಿನ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ಕೊರೊನಾ ಸಮಯದಲ್ಲಿ ಕಾಲರ್ ಟ್ಯೂನ್ನಲ್ಲಿ ಕೇಳಿ ಬರುವ ಕೊರೊನಾ ಮುನ್ನೆಚ್ಚರಿಕೆ ಧ್ವನಿಯನ್ನು ನೀಡಿದ್ದರು. ಇದೀಗ ಉತ್ತರಾಖಂಡ್ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ರಿಯಾಲಿಟಿ ಶೋ ನಡೆಸಲಿದ್ದಾರೆ.
ನಿನ್ನೆ ಶುಕ್ರವಾರ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು ಅಮಿತಾಬ್ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ '100 ಡೇಸ್ ಇನ್ ಹೆವನ್' ಎಂದು ಹೆಸರಿಡಲಾಗಿದೆ.
ಈ ಕಾರ್ಯಕ್ರಮ ಹಲವಾರು ಸುದ್ದಿ ವಾಹಿನಿಗಳು ಹಾಗೂ ಮನರಂಜನಾ ವಾಹಿನಿಗಳಲ್ಲಿ ಪ್ರಸಾರ ಆಗಲಿದೆ. ಕಾರ್ಯಕ್ರಮವನ್ನು ಸಿನಿಮಾ ನಿರ್ಮಾಣ ಸಂಸ್ಥೆಯಾದ ಮೆಸ್ಸರ್ಸ್ ಜಂಪಿಂಗ್ ಟೊಮೊಟೊ ಮಾರ್ಕೆಟಿಂಗ್ ಪ್ರೈ.ಲಿ ನಡೆಸಿಕೊಡುತ್ತಿದ್ದು, ಸರ್ಕಾರದ ವತಿಯಿಂದ 100 ಡೇಸ್ ಇನ್ ಹೆವನ್ ಶೋ ನಡೆಸಲು 12.81 ಕೋಟಿ ಹಣ ನೀಡಲಾಗಿದೆಯಂತೆ.