ಕರ್ನಾಟಕ

karnataka

ETV Bharat / sitara

ಅಕ್ಷಿತ್ ಶಶಿಕುಮಾರ್ ಅಭಿನಯದ 'ಓ ಮೈ ಲವ್' ಚಿತ್ರದ ಭರ್ಜರಿ ಫೋಟೋಶೂಟ್​​ - O my love photoshoot

ಸುಪ್ರೀಮ್ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. 'ಓ ಮೈ ಲವ್' ಅವರು ಅಭಿನಯಿಸುತ್ತಿರುವ ಮೂರನೇ ಸಿನಿಮಾ. ಇತ್ತೀಚೆಗೆ ಈ ಚಿತ್ರದ ಫೋಟೋಶೂಟ್ ಮಾಡಿಸಲಾಗಿದೆ.

O my love movie photo shoot
'ಓ ಮೈ ಲವ್' ಫೋಟೋಶೂಟ್​​

By

Published : Dec 21, 2020, 2:34 PM IST

ಬೆಂಗಳೂರು:ಅಕ್ಷಿತ್ ಶಶಿಕುಮಾರ್ 'ಓ ಮೈ ಲವ್' ಎಂ ಬ ಸಿನಿಮಾದಲ್ಲಿ ನಟಿಸುತ್ತಿದ್ದು ಚಿತ್ರದಲ್ಲಿ ಕೀರ್ತೀ ಕಲಕೇರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಶಶಿಕುಮಾರ್ ಅಭಿನಯದ ಮೂರನೇ ಚಿತ್ರವಾಗಿದ್ದು ಇತ್ತೀಚೆಗೆ ಅಕ್ಷಿತ್ ಹಾಗೂ ಕೀರ್ತಿ ಇಬ್ಬರೂ ಭರ್ಜರಿ ಫೋಟೋಶೂಟ್ ಮಾಡಿಸಿದ್ದಾರೆ.

'ಓ ಮೈ ಲವ್' ಫೋಟೋಶೂಟ್​​

ಫೋಟೋಶೂಟ್​​ನಲ್ಲಿ ನಾಯಕ ನಾಯಕಿ ಸುಮಾರು‌ 20 ಕಾಸ್ಟೂಮ್‌ಗಳಲ್ಲಿ ಮಿಂಚಿದ್ದಾರೆ.‌ ವಿಭಿನ್ನ ಉಡುಗೆಗಳಲ್ಲಿ ಫೋಟೋಶೂಟ್ ಮಾಡಿಸಲಾಗಿದೆ. ಎತ್ನಿಕ್ ಉಡುಗೆ ಜೊತೆ ವೆಸ್ಟರ್ನ್ ಕಾಸ್ಟ್ಯೂಮ್ ಧರಿಸಿ ಫೋಟೋಶೂಗಳಲ್ಲಿ ನಾಯಕ ನಾಯಕಿ ಮಿಂಚಿದ್ದಾರೆ. ಮೊದಲ ಎರಡು ಚಿತ್ರಗಳಿಗಿಂದ ಈ ಸಿನಿಮಾ ಕೊಂಚ ವಿಭಿನ್ನವಾಗಿದೆ ಅಂತಾರೆ ನಟ ಅಕ್ಷಿತ್. ಮೊದಲ ಎರಡು ಸಿನಿಮಾಗಳಲ್ಲಿ ಸೀದಾ ಸಾದ ಹುಡುಗನ ಪಾತ್ರ ನಿರ್ವಹಿಸಿದ್ದೇನೆ. ಆದ್ರೆ 'ಓ ಮೈ ಲವ್' ಚಿತ್ರದಲ್ಲಿ ನಾನು ಪ್ಲೇ ಬಾಯ್ ಪಾತ್ರ ನಿರ್ವಹಿಸುತ್ತಿದ್ದೇನೆ ಇದು ನನಗೆ ಚಾಲೆಂಜಿಂಗ್ ಪಾತ್ರ ಎಂದು ಅಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೀರ್ತಿಗೆಇದು ಎರಡನೇ ಚಿತ್ರವಾಗಿದ್ದು, ಈ ಚಿತ್ರದಲ್ಲಿ ನಟಿಸಲು ನಾನು ತುಂಬಾ ಉತ್ಸುಕಳಾಗುದ್ದೇನೆ. ಚಿತ್ರದಲ್ಲಿ ನನ್ನದು ಬಬ್ಲಿ ಪಾತ್ರ ಮತ್ತು ಯಾವಾಗಲೂ ಹಾಸ್ಯ ಮಾಡಿಕೊಂಡಿರುವ ಪಾತ್ರ ಎಂದು ಹೇಳಿದ್ದಾರೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ABOUT THE AUTHOR

...view details