ಬಾಲಿವುಡ್ ಸಿನಿ ಪ್ರಿಯರಿಗೆ ಅಕ್ಷಯ್ ಕುಮಾರ್, ಅಜಯ್ ದೇವ್ಗನ್ ಮತ್ತು ರಣವೀರ್ ಸಿಂಗ್ ಈ ಮೂರು ತಾರೆಯರನ್ನು ಒಂದೇ ಸೀನ್ನಲ್ಲಿ ನೋಡುವ ಕನಸು ಇರುತ್ತದೆ. ಈ ಕನಸು ಇದೀಗ ನನಸಾಗುವ ಸಮಯ ಬಂದಿದೆ.
ಹೌದು, ಬಾಲಿವುಡ್ನ ನಿರ್ದೇಶಕ ರೋಹಿತ್ 'ಸೂರ್ಯವಂಶಿ' ಎಂಬ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಕ್ಲೈಮ್ಯಾಕ್ಸ್ ಸೀನ್ನಲ್ಲಿ ಅಕ್ಷಯ್ ಕುಮಾರ್, ಅಜಯ್ ದೇವ್ಗನ್ ಮತ್ತು ರಣವೀರ್ ಸಿಂಗ್ ಒಂದೇ ಸೀನ್ನಲ್ಲಿ ಕಾಣಲಿದ್ದಾರೆ.
ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಡೇರ್ಡೆವಿಲ್ ಎಟಿಎಸ್ ಅಧಿಕಾರಿ ವೀರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸಿನಿಮಾದಲ್ಲಿ ಅಕ್ಷಯ್ ಅಪರಾಧ ಮತ್ತು ಅಪರಾಧಿಗಳ ವಿರುದ್ಧ ಹೋರಾಟ ನಡೆಸುತ್ತಾರಂತೆ. ಈ ಸಿನಿಮಾವನ್ನು ಬ್ಯಾಂಕಾಕ್ ಮತ್ತು ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.
ಇನ್ನು ರಣವೀರ್ ಸಿಂಗ್ ಮತ್ತು ಅಜಯ್ ದೇವ್ಗನ್ ಸೂರ್ಯವಂಶಿ ಸಿನಿಮಾದಲ್ಲಿ ಗೆಸ್ಟ್ ರೋಲ್ನಲ್ಲಿ ಕಾಣಸಿಗಲಿದ್ದಾರೆ. ಈ ಹಿಂದೆ 'ಸಿಂಬ' ಸಿನಿಮಾದಲ್ಲಿ ಈ ಮೂವರು ನಟರು ನಟಿಸಿದ್ದರು. ಆದ್ರೆ ಒಂದೇ ಸೀನ್ನಲ್ಲಿ ಕಾಣಿಸಿರಲಿಲ್ಲ.
ಸೂರ್ಯವಂಶಿ ಸಿನಿಮಾದಲ್ಲಿ ಕತ್ರಿನಾ ಕೈಫ್ ಕೂಡ ನಟಿಸುತ್ತಿದ್ದು, ನಾಯಕ ಅಕ್ಷಯ್ ಕುಮಾರ್ ಜೊಡಿಯಾಗಿ ಅಭಿನಯ ಮಾಡಲಿದ್ದಾರಂತೆ.