ವಿಜಯ್ ದೇವರಕೊಂಡ ಹೆಸರು ಕೇಳಿದೊಡನೆ ನೆನಪಿಗೆ ಬರುವುದು 'ಅರ್ಜುನ್ ರೆಡ್ಡಿ' ಸಿನಿಮಾ. ಈ ಚಿತ್ರದ ಹಿಂದಿ ರೀಮೇಕ್ 'ಕಬೀರ್ ಸಿಂಗ್' ಈ ತಿಂಗಳ 21 ರಂದು ಬಿಡುಗಡೆಯಾಗುತ್ತಿದೆ. ಶಾಹಿದ್ ಕಪೂರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
'ಆದಿತ್ಯ ವರ್ಮಾ' ಹೊಸ ಟೀಸರ್ ರಿಲೀಸ್ - undefined
ಗಿರೀಶಯ್ಯ ನಿರ್ದೇಶನದ 'ಆದಿತ್ಯ ವರ್ಮಾ' ಸಿನಿಮಾದ ಹೊಸ ಟೀಸರ್ ಬಿಡುಗಡೆಯಾಗಿದೆ. ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಜೂನ್ ಕೊನೆಯ ವಾರ ಅಥವಾ ಜುಲೈನಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
ಇನ್ನು ಅರ್ಜುನ್ ರೆಡ್ಡಿ ತಮಿಳು ರೀಮೇಕ್ 'ಆದಿತ್ಯ ವರ್ಮಾ' ಟೀಸರ್ ನಿನ್ನೆ ಬಿಡುಗಡೆಯಾಗಿದೆ. 'ಆದಿತ್ಯ ವರ್ಮಾ' ಚಿತ್ರೀಕರಣ ಆರಂಭವಾಗಿ ಸುಮಾರು 2 ವರ್ಷಗಳಾಗಿವೆ. ಈ ಚಿತ್ರದ ಬಹುತೇಕ ಶೂಟಿಂಗ್ ಕೂಡಾ ಪೂರ್ಣಗೊಂಡು 2 ಟೀಸರ್ಗಳು ಕೂಡಾ ಬಿಡುಗಡೆಯಾಗಿತ್ತು. ಆದರೆ ಬಾಲಾ ನಿರ್ದೇಶನದ ವರ್ಷನ್ ನಿರ್ಮಾಪಕರಿಗೆ ಇಷ್ಟವಾಗದ ಕಾರಣ ನಾಯಕ ಹೊರತುಪಡಿಸಿ ಇಡೀ ಚಿತ್ರತಂಡವನ್ನು ಬದಲಿಸಿದ ನಿರ್ಮಾಪಕರು, ಚಿತ್ರವನ್ನು ಹೊಸದಾಗಿ ನಿರ್ದೇಶಿಸಲು ಗಿರೀಶಯ್ಯ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಇದೀಗ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಟೀಸರ್ ಬಿಡುಗಡೆಯಾದ 10 ಗಂಟೆಗಳಲ್ಲಿ ಸುಮಾರು 2 ಮಿಲಿಯನ್ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಜೂನ್ ಅಂತ್ಯದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. E4 ಎಂಟರ್ಟೈನ್ಮೆಂಟ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಬನಿತ್ ಸಿಂಧು, ಪ್ರಿಯಾ ಆನಂದ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.