ನಟಿ ಅದಿತಿ ಪ್ರಭುದೇವ ಸ್ಯಾಂಡಲ್ವುಡ್ನಲ್ಲಿ, ವಿಭಿನ್ನ ಸಿನಿಮಾ ಮೂಲಕ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟಿ. ಸದ್ಯ ಸಿನಿಮಾ ಶೂಟಿಂಗ್ ಇಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಶ್ಯಾನೇ ಟಾಪಗೌಳೆ ಖ್ಯಾತಿಯ ನಟಿ ಆದಿತಿ ಪ್ರಭುದೇವ ಸೋಷಿಯಲ್ ಮೀಡಿಯಾದಲ್ಲಿ, ಹೊಸ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಆ್ಯಕ್ಟಿವ್ ಆಗಿದ್ದಾರೆ.
ಸದ್ಯ ಕೊರೊನಾದಿಂದಾಗಿ ದೇಶಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಾಗಿ ನೂರಾರು ಜನ, ಈ ಹೆಮ್ಮಾರಿಗೆ ಬಲಿಯಾಗ್ತಾ ಇದ್ದಾರೆ. ಹೀಗಾಗಿ ಆದಿತಿ ಪ್ರಭುದೇವ, ಅಕ್ಷಯ ತೃತೀಯ ಹಬ್ಬದ ಅಂಗವಾಗಿ ಮನೆಯಲ್ಲಿ ಚೆಂದದ ರಂಗೋಲಿಯನ್ನು ಬಿಡಿಸಿ, ವಿಶೇಷ ಪೂಜೆ ಮಾಡಿದ್ದಾರೆ. ಈ ಕೊರೊನಾ ದೂರವಾಗಿ ಆದಷ್ಟು ಬೇಗ ಎಲ್ಲರಿಗೂ ಒಳ್ಳೆಯ ದಿನಗಳು ಬರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಬರೆದುಕೊಂಡಿದ್ದಾರೆ.