ಕರ್ನಾಟಕ

karnataka

By

Published : Oct 24, 2020, 8:04 PM IST

ETV Bharat / sitara

ರಿವೀಲ್ ಆಯ್ತು ಅದಿತಿ ಪ್ರಭುದೇವ ನಟನೆ ಹೊಸ ಸಿನಿಮಾ ಟೈಟಲ್​​

ಗ್ಲ್ಯಾಮರ್ ಬೆಡಗಿ ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿರೋ, ಮಹಿಳಾ ಸೂಪರ್ ಹೀರೋ ಪರಿಕಲ್ಪನೆಯ ಟೈಟಲ್ ಅನಾವರಣ ಮಾಡಲಾಗಿದೆ. ಈ ಚಿತ್ರಕ್ಕೆ ಆನ ಎಂದು ನಾಮಕರಣ ಮಾಡಲಾಗಿದೆ. ಸಿನಿಮಾವನ್ನು ಮನೋಜ್ ಪಿ ನಡಲುಮನೆ ನಿರ್ದೇಶನ ಮಾಡುತ್ತಿದ್ದಾರೆ.

Aditi Prabhudeva acting in Aana movie
ರಿವೀಲ್ ಆಯ್ತು ಅದಿತಿ ಪ್ರಭುದೇವ ನಟನೆ ಹೊಸ ಸಿನಿನಾ ಟೈಟಲ್​​

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಕಾನ್ಸೆಪ್ಟ್ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇದೀಗ ಇಂತಹದ್ದೇ ಹೊಸ ಕಾನ್ಸೆಪ್ಟ್​​​ನೊಂದಿಗೆ ಯುವ ನಿರ್ದೇಶಕ ಮನೋಜ್ ಪಿ ನಡಲುಮನೆ ಹೊಸ ಸಿನಿಮಾವನ್ನು ಹೊರ ತರ್ತಿದ್ದಾರೆ.

ಅದಿತಿ ಪ್ರಭುದೇವ

ಗ್ಲ್ಯಾಮರ್ ಬೆಡಗಿ ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿರೋ, ಮಹಿಳಾ ಸೂಪರ್ ಹೀರೋ ಪರಿಕಲ್ಪನೆಯ ಟೈಟಲ್ ಅನಾವರಣ ಮಾಡಲಾಗಿದೆ. ನಿರ್ದೇಶಕ ಮನೋಜ್ ಹೇಳುವ ಹಾಗೇ, ಇದೊಂದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಪರಿಕಲ್ಪನೆಯ ಸಿನಿಮಾ‌. ನವರಾತ್ರಿ ಹಬ್ಬದ ಸಂಭ್ರಮದ ನಿಮಿತ್ತ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಲಾಗಿದೆ. ಈ ಚಿತ್ರಕ್ಕೆ 'ಆನ' ಎಂಬ ಟೈಟಲ್ ಇಡಲಾಗಿದೆ ಎಂದರು.

ಆನ ಚಿತ್ರತಂಡ

ಚಿತ್ರದ ಬಗ್ಗೆ ಮಾತನಾಡಿರುವ ಅದಿತಿ, ತುಂಬಾ ಇಷ್ಟಪಟ್ಟು ಮತ್ತು ಕಷ್ಟಪಟ್ಟು ಮಾಡಿದ ಸಿನಿಮಾ ಇದು. ಇಂಥಾ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಕಥೆ ಕೇಳಿ ಒಂದೇ ಸಲಕ್ಕೆ ನಟಿಸಲು ಒಪ್ಪಿಕೊಂಡಿದ್ದೇನೆ. ಚಿತ್ರದ ಬಹುಪಾಲು ಶೂಟಿಂಗ್ ರಾತ್ರಿ ಹೊತ್ತಿನಲ್ಲಿಯೇ ನಡೆದಿದೆ. ಇನ್ನು ಕೆಲ ಭಾಗದ ಚಿತ್ರೀಕರಣ ಬಾಕಿ ಇದೆ. ನನ್ನ ಸಿನಿಮಾ ಕರಿಯರ್‌ನಲ್ಲಿ ಇಲ್ಲಿಯವರೆಗೂ ನಾನು ಮಾಡದ ವಿಶೇಷ ಪಾತ್ರವಿದು ಎಂದಿದ್ದಾರೆ.

ನಿರ್ದೇಶಕ ಮನೋಜ್ ಪಿ ಮತ್ತು ಅದಿತಿ

ಇನ್ನು ಈ ಸಿನಿಮಾದಲ್ಲಿ ಅದಿತಿ ಜತೆಗೆ ನಾಲ್ಕು ಪ್ರಮುಖ ಪಾತ್ರಗಳಿವೆ. ಸಮರ್ಥ, ವಿಕಾಸ್ ಉತ್ತಯ್ಯ, ವರುಣ್ ಅಮರಾವತಿ ಮತ್ತು ಕಾರ್ತಿಕ್ ನಾಗರಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚೂರಿ ಕಟ್ಟೆ ಚಿತ್ರದಲ್ಲಿ ಗಮನ ಸೆಳೆದಿದ್ದ, ಪ್ರೇರಣಾ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡ್ತಾ ಇದ್ದಾರೆ. ಕಿರುಚಿತ್ರ ಮತ್ತು ಟೆಲಿ ಫಿಲಂಸ್‌ಗಳನ್ನು ನಿರ್ದೇಶನ ಮಾಡಿದ ಅನುಭವ ಹೊಂದಿರುವ ಮನೋಜ್, ಆನ ಸಿನಿಮಾ‌‌ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ‌.

ಆನ ಚಿತ್ರತಂಡದೊಂದಿಗೆ ಅದಿತಿ

ಲಾಕ್‌ಡೌನ್ ಸಮಯದಲ್ಲಿ ಹೊಳೆದ ಕಥೆ ಇದು. ಸದ್ಯ ಇಡೀ ಭಾರತದಲ್ಲಿ ಲೇಡಿ ಸೂಪರ್ ಹೀರೋ ಪರಿಕಲ್ಪನೆಯಲ್ಲಿ ಯಾವುದೇ ಸಿನಿಮಾ ಬಂದಿಲ್ಲ. ಅದನ್ನೇ ಗಮನದಲ್ಲಿಟ್ಟುಕೊಂಡು ಕಥೆ ಸಿದ್ಧಪಡಿಸಿಕೊಂಡು, ಆರಂಭಿಸಿದ್ದೆ. ಇನ್ನೆರಡು ದಿನದ ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಇದೆ. ಚಿತ್ರದ ಕೊನೆಯ 20 ನಿಮಿಷಗಳು ನಿಮ್ಮನ್ನ ಫ್ಯಾಂಟಸಿ ಲೋಕಕ್ಕೆ ಕರೆದೊಯ್ಯುವುದು ಪಕ್ಕಾ ಅಂತಾರೆ ನಿರ್ದೇಶಕರು.

ಆನ ಚಿತ್ರದ ಪೋಸ್ಟರ್​

‌ಹಾರರ್ ಶೈಲಿಯ ಅಂಶಗಳೂ ಈ ಸಿನಿಮಾದಲ್ಲಿವೆ. ತಾಂತ್ರಿಕವಾಗಿ ಇಡೀ ಸಿನಿಮಾ ಶ್ರೀಮಂತವಾಗಿ ಮೂಡಿಬಂದಿದೆ. ಇನ್ನೊಂದು ವಿಶೇಷ ಏನೆಂದರೆ, ಈ ಸಿನಿಮಾ ಮುಂದಿನ ದಿನಗಳಲ್ಲಿ ಚಾಪ್ಟರ್‌ಗಳಾಗಿಯೂ ಸಿದ್ಧ ಮಾಡಲು ಪ್ಲಾನ್ ಮಾಡಲಾಗಿದೆ ಎಂದು ನಿರ್ದೇಶಕ ಮನೋಜ್ ತಿಳಿಸಿದ್ದಾರೆ.

ಈ ಚಿತ್ರಕ್ಕೆ ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ, ವಿಜೇತ ಚಂದ್ರ ತಾಂತ್ರಿಕ ವರ್ಗದ ಹೊಣೆ ಹೊತ್ತಿದ್ದಾರೆ.

ABOUT THE AUTHOR

...view details