ಕರ್ನಾಟಕ

karnataka

ETV Bharat / sitara

ಹೆಣ್ಮಕ್ಳೂ ಸ್ಟ್ರಾಂಗು ಗುರೂ...ನಟಿ ಸಮಂತಾ ಸ್ಟಂಟ್​ ನೋಡಿ ಬೆರಗಾದ ಫ್ಯಾನ್ಸ್​

ಟಾಲಿವುಡ್ ಟಾಪ್ ನಟಿ ಸಮಂತಾ ಹೊಸ ವರ್ಕೌಟ್ ಮಾಡಿದ್ದಾರೆ. ಕೇವಲ ಕೈಗಳ ಸಹಾಯದಿಂದ ಕಬ್ಬಿಣದ ಕಂಬ ಏರಿದ್ದಾರೆ. ಈ ಸ್ಟಂಟ್ ವಿಡಿಯೋ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

actress samantha

By

Published : Aug 22, 2019, 9:16 PM IST

ಬಾಡಿ ಫಿಟ್ನೆಸ್ ವಿಚಾರದಲ್ಲಿ ಟಾಲಿವುಡ್​ ನಟಿ ಸಮಂತಾ ತುಂಬಾ ಕಟ್ಟುನಿಟ್ಟು. ತಮ್ಮ ದೇಹಸಿರಿಯನ್ನು ಅಚ್ಚುಕಟ್ಟಾಗಿ ರೂಪಿಸಿಕೊಳ್ಳುವಲ್ಲಿ ಸ್ಯಾಮ್ ತುಂಬಾ ಕೇರ್​ ತೆಗೆದುಕೊಳ್ಳುತ್ತಾರೆ.

ಮದುವೆ ನಂತರವೂ ಅಷ್ಟೇ ಫಿಟ್ ಆ್ಯಂಡ್ ಬ್ಯೂಟಿಫುಲ್ ಆಗಿರೋ ದೇಹ ಹೊಂದಿರುವ ಸಮಂತಾ ಅಕ್ಕಿನೇನಿ, ಇದಕ್ಕಾಗಿ ಪ್ರತಿನಿತ್ಯ ಜಿಮ್​​​​ನಲ್ಲಿ ಸಖತ್​ ವರ್ಕೌಟ್ ಮಾಡುತ್ತಾರೆ. ನಿತ್ಯ ಎರಡು-ಮೂರು ಗಂಟೆಗಳ ಕಾಲ ಜಿಮ್​​ನಲ್ಲಿ ಬೆವರು ಸುರಿಸುವ ಈ ನಟಿ ಕೆಲವೊಂದು ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ. ಸದ್ಯ ತಮ್ಮ ವರ್ಕೌಟ್ ವಿಡಿಯೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಟಾಲಿವುಡ್ ಟಾಪ್ ನಟಿ ಸಮಂತಾ ಹೊಸ ವರ್ಕೌಟ್ ಮಾಡಿದ್ದಾರೆ. ಕೇವಲ ಕೈಗಳ ಸಹಾಯದಿಂದ ಕಬ್ಬಿಣದ ಕಂಬ ಏರಿದ್ದಾರೆ. ತೋಳುಗಳು ಬಲಿಷ್ಠವಾಗಿದ್ದಾಗ ಮಾತ್ರ ಈ ವರ್ಕೌಟ್ ಸಾಧ್ಯವಾಗುತ್ತೆ. ಅದನ್ನು ಸಮಂತಾ ಮಾಡಿ ಮುಗಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಹೊಸದನ್ನು ಪ್ರಯತ್ನಿಸುವಾಗ ಯಾವತ್ತೂ ಹೆದರಬಾರದು. ನಿಮ್ಮ ಸಾಮರ್ಥ್ಯ ನೋಡಿ ನೀವೇ ಅಚ್ಚರಿ ಪಡುತ್ತೀರಿ ಎಂದು ಬರೆದುಕೊಂಡಿದ್ದಾರೆ.

ಇನ್ನು ಸಮಂತಾ ಅವರ ಈ ವರ್ಕೌಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗುತ್ತಿದೆ. ಸಮಂತಾಳ ಸಾಮರ್ಥ್ಯಕ್ಕೆ ಎಲ್ಲರೂ ಫಿದಾ ಆಗುತ್ತಿದ್ದಾರೆ.

ABOUT THE AUTHOR

...view details