ಕರ್ನಾಟಕ

karnataka

ETV Bharat / sitara

ಸೃಜನ್ ಮನೆಗೆ ಮಜಾ ನೀಡಲು ಬರ್ತಿದ್ದಾರೆ ಕೊಡಗಿನ ಕುವರಿಯರು.. - ಮಜಾ ಭಾರತ ಮತ್ತು ಮಜಾ ಟಾಕೀಸ್​​

ಕೊಡಗಿನ ಮೋಹಕ ಬೆಡಗಿಯರಾದ ಹರ್ಷಿಕಾ ಪೂಣಚ್ಚ, ಕೃಷಿ ತಾಪಂಡ ಹಾಗೂ ಶುಭ್ರಾ ಅಯ್ಯಪ್ಪ ಈ ವಾರದ ಮಜಾಭಾರತದಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಕವಿತಾ ಗೌಡ, ಕಾವ್ಯ ಗೌಡ ಹಾಗೂ ಶ್ವೇತಾ ಪ್ರಸಾದ್ ಕೂಡ ಈ ವಾರ ಮಜಾ ಮನೆಯಲ್ಲಿ ಮಿಂಚಲಿದ್ದಾರೆ..

actress harshika, krushi  in majaa talkies
ಮಜಾ ಸಂಗಮದಲ್ಲಿ ಹರ್ಷಿಕಾ ಪೂಣಚ್ಚ ,ಕೃಷಿ ತಾಪಂಡ ಹಾಗೂ ಶುಭ್ರಾ ಅಯ್ಯಪ್ಪ

By

Published : Jan 29, 2021, 3:20 PM IST

ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಮಜಾ ಟಾಕೀಸ್ ಪ್ರತಿ ವಾರವೂ ಕುತೂಹಲಕಾರಿ ಸಂಚಿಕೆ ಹೊತ್ತು ತರುತ್ತಿದೆ. ಕಳೆದ ವಾರ ಮಜಾಭಾರತ ಮತ್ತು ಮಜಾ ಟಾಕೀಸ್ ಜೊತೆಯಾಗಿ ಮಜಾ ಸಂಗಮವನ್ನು ಆಚರಿಸಿಕೊಂಡಿತ್ತು. ಮಜಾ ಟಾಕೀಸ್ ತಾರಾಗಣ ಹಾಗೂ ಮಜಾ ಭಾರತದ ಸ್ಪರ್ಧಿಗಳು ಎಲ್ಲರೂ ಒಂದಾಗಿ ಮಜಾ ಸಂಗಮ ಸಂಚಿಕೆ ತಂದಿದ್ದರು.

ಮಜಾ ನೀಡಲು ಬರ್ತಿದ್ದಾರೆ ಕೊಡಗಿನ ಕುವರಿಯರು

ಮಜಾ ಭಾರತದ ತೀರ್ಪುಗಾರರಾದ ಗುರುಕಿರಣ್ ಹಾಗೂ ರಚಿತಾ ರಾಮ್ ಕೂಡ ಇದರಲ್ಲಿ ಭಾಗವಹಿಸಿದ್ದು, ಕಳೆದ ವಾರವಂತೂ ಕಿರುತೆರೆ ವೀಕ್ಷಕರಿಗೆ ದುಪ್ಪಟ್ಟು ಮನರಂಜನೆಯೂ ದೊರಕಿತ್ತು. ಈ ವಾರದ ಸಂಚಿಕೆಯಲ್ಲಿ ಕೊಡಗಿನ ಬೆಡಗಿಯರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ : 'ರಾಬರ್ಟ್' ಸಿನಿಮಾ ವಿವಾದ...ಫಿಲ್ಮ್ ಚೇಂಬರ್ ಅಧ್ಯಕ್ಷರ ಜೊತೆ ದರ್ಶನ್ ಚರ್ಚೆ...!

ಕೊಡಗಿನ ಮೋಹಕ ಬೆಡಗಿಯರಾದ ಹರ್ಷಿಕಾ ಪೂಣಚ್ಚ, ಕೃಷಿ ತಾಪಂಡ ಹಾಗೂ ಶುಭ್ರಾ ಅಯ್ಯಪ್ಪ ಈ ವಾರದ ಮಜಾಭಾರತದಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಕವಿತಾ ಗೌಡ, ಕಾವ್ಯ ಗೌಡ ಹಾಗೂ ಶ್ವೇತಾ ಪ್ರಸಾದ್ ಕೂಡ ಈ ವಾರ ಮಜಾ ಮನೆಯಲ್ಲಿ ಮಿಂಚಲಿದ್ದಾರೆ.

ಮಜಾ ಸಂಗಮದಲ್ಲಿ ಹರ್ಷಿಕಾ ಪೂಣಚ್ಚ ,ಕೃಷಿ ತಾಪಂಡ ಹಾಗೂ ಶುಭ್ರಾ ಅಯ್ಯಪ್ಪ

ಕೊಡಗಿನ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸುಲಿರುವ ಕೊಡಗಿನ ಬೆಡಗಿಯರು ಕೊಡವ ಸಂಪ್ರದಾಯದ ಕುರಿತು ಮಾತನಾಡಲಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಕೊಡಗಿನ ಕುವರಿಯರು ಕೊಡವ ಸಂಪ್ರದಾಯದ ನೃತ್ಯ "ವಾಲಗ"ಕ್ಕೆ ಹೆಜ್ಜೆ ಹಾಕಲಿದ್ದಾರೆ. ಇದಲ್ಲದೇ ಮಜಾ ಟಾಕೀಸ್‌ನ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ಕೂಡ ಅತಿಥಿಗಳೊಂದಿಗೆ ಹೆಜ್ಜೆ ಹಾಕಲಿದ್ದಾರೆ.

ABOUT THE AUTHOR

...view details