ಕರ್ನಾಟಕ

karnataka

ETV Bharat / sitara

ಬಿಗ್‌ಬಾಸ್​​ ಮನೆಯಲ್ಲಿರುವ ಈ ನಟಿ ರಾಕಿಂಗ್​​ ಸ್ಟಾರ್​​​ ಯಶ್​​ ಸಂಬಂಧಿ?

ಈ ಚೆಲುವೆ ರಾಕಿಂಗ್ ಸ್ಟಾರ್ ಯಶ್ ಅವರ ಸಂಬಂಧಿಯಂತೆ. ಆದ್ರೆ, ಬಣ್ಣದ ಲೋಕದಲ್ಲಿದ್ರೂ ಈ ಕುತೂಹಲಕಾರಿ ವಿಚಾರವನ್ನೇಕೆ ಬಾಯಿ ಬಿಟ್ಟಿಲ್ಲ ಅನ್ನೋದು ಸಿನಿಮಾ ಗಾಸಿಪ್ ಪ್ರಿಯರ ಪ್ರಶ್ನೆ.

ದೀಪಿಕಾ ದಾಸ್​ ಮತ್ತು ಯಶ್​​

By

Published : Oct 23, 2019, 1:46 PM IST

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ ಧಾರವಾಹಿ ಮನೆ ಮಾತಾಗಿರುವಂಥದ್ದು. ಈ ಸೀರಿಯಲ್​​ನಲ್ಲಿ ಅಮೃತಾಳ ಪಾತ್ರ ಮಾಡುತ್ತಿದ್ದ ದೀಪಿಕಾ ದಾಸ್​ ಬಿಗ್‌ಬಾಸ್​ಗೆ ಆಯ್ಕೆಯಾಗಿ ದೊಡ್ಡಮನೆ ಸೇರಿದ್ದಾರೆ.

ದೀಪಿಕಾ ದಾಸ್​ ಬಿಗ್‌ಬಾಸ್​​​ ಮನೆ ಹೊಕ್ತಿದ್ದಂತೆ ಕೆಲವು ಗಾಸಿಪ್​ ಸುದ್ದಿಗಳು ಹರಿದಾಡುತ್ತಿದ್ದು, ನಾಗಿಣಿ ಸೀರಿಯಲ್​ ಇನ್ಮೇಲೆ ಪ್ರಸಾರ ಆಗಲ್ಲ ಎಂಬ ಮಾಹಿತಿಯೂ ಇದೆ. ಈಕೆ ನಟಿಸಿದ ಮೊದಲ ಧಾರಾವಾಹಿಯಲ್ಲೇ ಇನ್ನೊಂದು ಗಾಸಿಪ್​ ಜೋರಾಗಿದೆ.

ದೀಪಿಕಾ ದಾಸ್​

ಲೇಟೆಸ್ಟ್‌ ವಿಷ್ಯ ಏನಪ್ಪ ಅಂದ್ರೆ, ದೀಪಿಕಾ, ರಾಕಿಂಗ್ ಸ್ಟಾರ್ ಯಶ್ ಅವರ ಸಂಬಂಧಿಯಂತೆ. ಆದ್ರೆ, ಬಣ್ಣದ ಲೋಕಕ್ಕೆ ದೀಪಿಕಾ ಬಂದು ಇಷ್ಟು ವರ್ಷಗಳಾದರೂ ಯಶ್​​ ಮತ್ತು ದೀಪಿಕಾ ಸಂಬಂಧಿಕರು​​ ಎಂಬ ಕುತೂಹಲಕಾರಿ ವಿಚಾರ ಯಾರಿಗೂ ಗೊತ್ತಿಲ್ಲ. ದೀಪಿಕಾ ಅವರ ತಾಯಿಯ ಕಡೆಯಿಂದ ಯಶ್ ತುಂಬಾ ಹತ್ತಿರದ ಸಂಬಂಧಿಯಂತೆ. ದೀಪಿಕಾದಾಸ್​​ ಯಶ್​ ಚಿಕ್ಕಮ್ಮನ ಮಗಳು ಎಂದು ಹೇಳಲಾಗುತ್ತಿದೆ. ಆದರೆ ದೀಪಿಕಾ ಅವರಾಗಲೀ, ಯಶ್​​ ಆಗಲಿ ಈ ಬಗ್ಗೆ ಎಲ್ಲಿಯೂ ಹೇಳಲೇ ಇಲ್ಲ‌. ಆದ್ರೆ ಈ ಗಾಸಿಪ್​ ಸುದ್ದಿಗಳಿಗೆ ತೆರೆ ಬೀಳಬೇಕೆಂದರೆ ದೀಪಕಾ ಅಥವಾ ರಾಕಿಂಗ್​ ಸ್ಟಾರ್​​ ತಮ್ಮ ಸಂಬಂಧದ ಬಗ್ಗೆ ಹೇಳಿಕೊಳ್ಳಬೇಕು ಅನ್ನೋದು ಅಭಿಮಾನಿಗಳ ಪಿಸುಮಾತು.

ದೀಪಿಕಾ ದಾಸ್​

ಒಟ್ಟಾರೆ ತಮ್ಮ ಮನೋಜ್ಞ ಅಭಿನಯದ ಮೂಲಕ ನಟನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಯಶ್ ಮತ್ತು ದೀಪಿಕಾ ದಾಸ್​​​ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ದೀಪಿಕಾ ದಾಸ್​
ಯಶ್​​​

ABOUT THE AUTHOR

...view details