'ವಾಲಿ' ಹಾಗೂ 'ವೀರಮದಕರಿ' ಚಿತ್ರಗಳಲ್ಲಿ ನಟ ಸುದೀಪ್ ದ್ವಿಪಾತ್ರಗಳಲ್ಲಿ ನಟಿಸಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕಿಚ್ಚ 'ಬಿಲ್ಲ, ರಂಗ, ಬಾಷ' ಚಿತ್ರದಲ್ಲಿ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಜ್-ವಿಷ್ಣು ನಂತ್ರ ತ್ರಿಮೂರ್ತಿ ಪಾತ್ರದಲ್ಲಿ ಸುದೀಪ್ - ಸುದೀಪ್
ರಂಗಿತರಂಗ ಗ್ರ್ಯಾಂಡ್ ಸಕ್ಸಸ್ ಮೂಲಕ ಚಂದನವನಕ್ಕೆ ಬಂದ ನಿರ್ದೇಶನ ಅನೂಪ್ ಭಂಡಾರಿ ರಾಜರಥ ಚಿತ್ರದಲ್ಲಿ ಹೇಳಿಕೊಳ್ಳುವಂತ ಗೆಲುವು ಪಡೆಯಲಿಲ್ಲ. ಇದೀಗ ಸುದೀಪ್ ಅವರಿಗೆ 'ಬಿಲ್ಲ ರಂಗ ಬಾಷ' ಚಿತ್ರ ಮಾಡುತ್ತಿದ್ದಾರೆ. ಟೈಟಲ್ ಮೂಲಕವೇ ಈ ಸಿನಿಮಾ ಸೆಟ್ಟೇರುವ ಮುನ್ನ ಭಾರಿ ನಿರೀಕ್ಷೆ ಮೂಡಿಸಿದೆ.
ಹೌದು, ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಬಾಷ’ ಚಿತ್ರದಲ್ಲಿ ಸುದೀಪ್ ಮೂರು ಪಾತ್ರ ಮಾಡುತ್ತಿದ್ದಾರೆ. ಇವರಿಗೆ ಮೂವರು ನಾಯಕಿಯರು ಜತೆಯಾಗಲಿದ್ದಾರೆ. ಈ ಚಿತ್ರ ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ರೆಡಿಯಾಗಲಿದೆ ಎನ್ನುವುದು ಗಾಂಧಿನಗರದ ಮಾತು.
ಕಿಚ್ಚ ಅವರ ‘ಪೈಲ್ವಾನ’ ಏಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಸುದೀಪ್ ಅವರಿಗೆ ತೆಲುಗು, ತಮಿಳು, ಈ ಮೊದ್ಲು ಹಿಂದಿ ಮಾರುಕಟ್ಟೆಯಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿರುವುದರಿಂದ ಈ ‘ಬಿಲ್ಲ ರಂಗ ಭಾಷ’ ಚಿತ್ರವನ್ನೂ ಕನಿಷ್ಠ ಮೂರು ಭಾಷೆಗಳಲ್ಲಿ ತಯಾರಿಸಿ, ಆಮೇಲೆ ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡುವ ಯೋಚನೆಯಿದೆ. ಒಂದು ಅಂದಾಜಿನ ಪ್ರಕಾರ ಕಿಚ್ಚ ಸುದೀಪ್ ಅವರ ‘ಬಿಲ್ಲ ರಂಗ ಭಾಷ’ 2020 ರಲ್ಲಿ ಸೆಟ್ಟೇರುವುದು. ಇದಕ್ಕೆ 70 ಕೋಟಿ ಬಜೆಟ್ ಎಂದು ಸಹ ಲೆಕ್ಕ ಹಾಕುತ್ತಿದ್ದಾರಂತೆ ನಿರ್ದೇಶಕ ಅನೂಪ್ ಭಂಡಾರಿ. ‘ಬಿಲ್ಲ ರಂಗ ಬಾಷ’ ಚಿತ್ರಕ್ಕೆ ಒನ್ಸ್ ಅಪಾನ್ ಎ ಟೈಮ್ ಇನ್ 2209’ ಎಂಬ ಅಡಿ ಬರಹ ಇದೆ.