ಕರ್ನಾಟಕ

karnataka

By

Published : Sep 7, 2019, 11:04 AM IST

ETV Bharat / sitara

‘ಡೆಮೋ ಪೀಸ್’ ಪೋಸ್ಟರ್​ ಬಿಡುಗಡೆ; ನಟನೆಯಿಂದ ನಿರ್ಮಾಣಕ್ಕೆ ಕಾಲಿಟ್ಟ ಸ್ಪರ್ಶರೇಖಾ

ಕನ್ನಡ ಚಿತ್ರರಂಗದಲ್ಲಿ ‘ಸ್ಪರ್ಶ’ ಮೂಲಕ ಕಿಚ್ಚ ಸುದೀಪ್​ಗೆ ನಾಯಕಿಯಾಗಿ ಸ್ಪರ್ಶ ರೇಖಾ ಎಂದೇ ಖ್ಯಾತಿ ಪಡೆದಿರುವ ನಟಿ ಬಹಳ ವರ್ಷಗಳ ನಂತರ ಸಿನಿಮಾಕ್ಕೆ ವಾಪಸ್ಸಾಗಿದ್ದಾರೆ. ಆದರೆ ಅವರೀಗ ತಮ್ಮ ರೇಖಾ ಮೂವೀಸ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ‘ಡೆಮೋ ಪೀಸ್’ ಪೋಸ್ಟರ್​ ರಿಲೀಸ್ ಮಾಡಿದ್ರು.

Demo piece movie poster

ಕನ್ನಡ ಚಿತ್ರರಂಗದಲ್ಲಿ ‘ಸ್ಪರ್ಶ’ ಸಿನಿಮಾ ಮೂಲಕ ಕಿಚ್ಚ ಸುದೀಪ್​ಗೆ ನಾಯಕಿಯಾಗಿ ಸ್ಪರ್ಶ ರೇಖಾ ಎಂದೇ ಖ್ಯಾತಿ ಪಡೆದಿರುವ ನಟಿ ಬಹಳ ವರ್ಷಗಳ ನಂತರ ಸಿನಿ ಲೋಕಕ್ಕೆ ವಾಪಸ್ಸಾಗಿದ್ದು ಗೊತ್ತೇ ಇದೆ. ಆದರೀಗ ನಟನೆಯಿಂದ ನಿರ್ಮಾಣಕ್ಕೆ ಕಾಲಿಟ್ಟ ಅವರ ಚೊಚ್ಚಲ ಸಿನಿಮಾ ‘ಡೆಮೋ ಪೀಸ್’ ತೆರೆಗೆ ಬರಲು ಸಜ್ಜಾಗಿದೆ.

ಈ ಚಿತ್ರದಲ್ಲಿ ನಾಯಕನಾಗಿ ಭರತ್ ನಟಿಸುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇಂದು ಇವರ ಹುಟ್ಟುಹಬ್ಬ. ಹಾಗಾಗಿ ರೇಖಾ ಮೊದಲ ಹಂತದ ಪಬ್ಲಿಸಿಟಿಗಾಗಿ ಪೋಸ್ಟರ್ ಅನಾವರಣ ಮಾಡುತ್ತಿದ್ದಾರೆ.

ಡೆಮೋಪೀಸ್ ಸಿನಿಮಾದ ಪೋಸ್ಟರ್​

ಈ ಸಿನಿಮಾವನ್ನು ಚೊಚ್ಚಲ ಬಾರಿಗೆ ವಿವೇಕ್ ವಿ ನಿರ್ದೇಶಿಸುತ್ತಿದ್ದಾರೆ. ಭರತ್​ಗೆ ನಾಯಕಿಯಾಗಿ ಸೋನಲ್ ಮೊಂಟೆರಿ ಅಭಿನಯಿಸಿದ್ದಾರೆ. ಚಕ್ರವರ್ತಿ ಚಂದ್ರಚೂಡ್, ಶ್ರೀಕಾಂತ್ ಹೆಬ್ಳೀಕರ್, ಸ್ಪರ್ಶ ರೇಖಾ, ರೂಪೇಶ್, ಕಾರ್ತಿಕ್, ಲೋಹಿತ್, ರಾಕ್​ಲೈನ್ ಸುಧಾಕರ್ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ.

ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಾಲ ಸರಸ್ವತಿ ಅವರ ಛಾಯಾಗ್ರಹಣ ಸಿನಿಮಾಗಿದೆ. ಅರ್ಜುನ್ ರಾಮು ಸಂಗೀತ ನೀಡಿದ್ದಾರೆ. ನಾಗರ್ಜುನ್ ಗೀತೆ ರಚಿಸಿದ್ದು, ರಾಜೇಶ್ ಕೃಷ್ಣ ಹಾಗೂ ಸಂಚಿತ್ ಹೆಗ್ಡೆ ಕಂಠಸಿರಿಯಿದೆ.

ABOUT THE AUTHOR

...view details