ಕರ್ನಾಟಕ

karnataka

ETV Bharat / sitara

ಕೆಂಪೇಗೌಡ ಕಟ್ಟಿದ ನಾಡಲ್ಲಿ ಪೈಲ್ವಾನ್ ಗಾನ ಬಜಾನಾ... ಕಿಚ್ಚನ ಬಾಲ್ಯ ಸ್ನೇಹಿತನಿಂದ ಆಡಿಯೋ ರಿಲೀಸ್ - ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ

ಇದೇ 18, ಭಾನುವಾರ ಬೆಂಗಳೂರಿನ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಆಗಲಿದೆ.

pailwan audio

By

Published : Aug 15, 2019, 8:42 AM IST

ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಚಿತ್ರದುರ್ಗದಿಂದ ಬೆಂಗಳೂರಿಗೆ ಶಿಫ್ಟ್ ಆಗಿದೆ. ಇದೇ 18 ರಂದು ಕೆಂಪೇಗೌಡ ಕಟ್ಟಿದ ನಾಡಲ್ಲಿ ಪೈಲ್ವಾನ್ ಧ್ವನಿ ಸುರಳಿ ಅನಾವರಣಗೊಳ್ಳಲಿದೆ.

ಈ ಮೊದಲು ಇದೇ 9 ವರಮಹಾಲಕ್ಷ್ಮೀ ಹಬ್ಬದಂದು ಕೋಟೆನಾಡು ಚಿತ್ರದುರ್ಗದಲ್ಲಿ ಪೈಲ್ವಾನ್ ಆಡಿಯೋ ರಿಲೀಸ್​ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಭೀಕರ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದ ಹಿನ್ನೆಲೆ ಕಾರ್ಯಕ್ರಮ ರದ್ದುಗೊಳಿಸಿದ್ದರು ಸುದೀಪ್​. ಇದೀಗ ಹೊಸ ದಿನಾಂಕ ಪ್ರಕಟಿಸಿಸಲಾಗಿದೆ.

ಪೈಲ್ವಾನ್ ಆಡಿಯೋ ರಿಲೀಸ್

ಇದೇ 18 ಭಾನುವಾರ ಬೆಂಗಳೂರಿನ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಪೈಲ್ವಾನ್ ಗಾನಬಜಾನಾ ಹೊರಬರಲಿದೆ.

ಬಾಲ್ಯಸ್ನೇಹಿತನಿಂದ ಆಡಿಯೋ ಲಾಂಚ್ :

ಮತ್ತೊಂದು ವಿಶೇಷ ಅಂದ್ರೆ ಪೈಲ್ವಾನ್ ಚಿತ್ರದ ಹಾಡುಗಳನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಲಿದ್ದಾರೆ. ಸುದೀಪ್ ಹಾಗೂ ಪುನೀತ್ ಬಾಲ್ಯ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತು. ಪೈಲ್ವಾನ್ ಹಾಡುಗಳ ರಿಲೀಸ್​ ಕಾರ್ಯಕ್ರಮ ಕಾರಣಾಂತರಗಳಿಂದ ಸಾಕಷ್ಟು ಬಾರಿ ಮುಂದೂಡಲ್ಪಟ್ಟಿದೆ. ಇದಕ್ಕೆ ಸಹಕರಿಸಿ ಕಾರ್ಯಕ್ರಮಕ್ಕೆ ಬರುತ್ತಿರುವ ಅಪ್ಪು ಅವರಿಗೆ ಕಿಚ್ಚ ಧನ್ಯವಾದ ಹೇಳಿದ್ದಾರೆ.

ಸುದೀಪ್ ಹಾಗೂ ಅಪ್ಪು

ABOUT THE AUTHOR

...view details