ಕರ್ನಾಟಕ

karnataka

ETV Bharat / sitara

ಬಾಲಿವುಡ್​​ಗೆ ಬೇತಾಳನಂತೆ ಬೆನ್ನು ಬಿದ್ದ ಕೊರೊನಾ.. ನಟಿ ಕತ್ರಿನಾ ಕೈಫ್​ಗೂ ಸೋಂಕು!

ಬಾಲಿವುಡ್​​ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ಗೂ ಸೋಂಕು ತಗುಲಿದೆ.

Actor Katrina Kaif
Actor Katrina Kaif

By

Published : Apr 6, 2021, 5:51 PM IST

Updated : Apr 6, 2021, 6:51 PM IST

ಮುಂಬೈ:ಬಾಲಿವುಡ್ ಮಂದಿಗೆ ಮಹಾಮಾರಿ ಕೊರೊನಾ ವೈರಸ್​ ಬೇತಾಳನಂತೆ ಬೆನ್ನು ಬಿದ್ದಿದ್ದು, ಈಗಾಗಲೇ ಅನೇಕರು ಈ ಸೋಂಕಿಗೊಳಗಾಗಿದ್ದಾರೆ. ಇದರ ಮಧ್ಯೆ ಇದೀಗ ನಟಿ ಕತ್ರಿನಾ ಕೈಫ್​ಗೂ ಸೋಂಕು ತಗುಲಿದೆ.

ತನಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ನಟಿ ಇನ್​​ಸ್ಟಾಗ್ರಾಮ್​ನಲ್ಲಿ ಮಾಹಿತಿ ಶೇರ್​ ಮಾಡಿಕೊಂಡಿದ್ದು, ಹೋಂ ಕ್ವಾರಂಟೈನ್​ ಆಗಿದ್ದಾರೆ. ನಿನ್ನೆ ಅಷ್ಟೇ ಕತ್ರಿನಾ ಭಾಯ್​ಫ್ರೆಂಡ್​ ವಿಕಿ ಕೌಶಾಲ್​ಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಬಹಿರಂಗಗೊಂಡಿತ್ತು. ಇದರ ಬೆನ್ನಲ್ಲೇ ಇದೀಗ ನಟಿಗೂ ಸೋಂಕು ಕಾಣಿಸಿಕೊಂಡಿದೆ.

ಕತ್ರಿನಾ ಕೈಫ್​ಗೆ ಕೊರೊನಾ

ಇದನ್ನೂ ಓದಿ:ಕೋವಿಡ್​ ನೆಗೆಟಿವ್​ ಖುಷಿ: ಲ್ಯಾಂಬೋರ್ಗಿನಿ ಖರೀದಿ ಮಾಡಿದ ನಟ ಕಾರ್ತಿಕ್​ ಆರ್ಯನ್​!

ತನ್ನ ಸಂಪರ್ಕಕ್ಕೆ ಬಂದ ಎಲ್ಲರೂ ತಕ್ಷಣವೇ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ನಟಿ ಮನವಿ ಮಾಡಿಕೊಂಡಿದ್ದು, ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದಿದ್ದಾರೆ.

ಎರಡನೇ ಹಂತದ ಮಹಾಮಾರಿ ಕೊರೊನಾ ವೈರಸ್​​ ಈ ಹಿಂದಿಗಿಂತಲೂ ವೇಗವಾಗಿ ಹರಡುತ್ತಿದ್ದು, ಈಗಾಗಲೇ ಅಕ್ಷಯ್​ ಕುಮಾರ್​, ನಟ ಗೋವಿಂದ್​, ಆಲಿಯಾ ಭಟ್​, ಭೂಮಿ ಪಡ್ನೇಕರ್​, ವಿಕಿ ಕೌಶಾಲ್​​, ಅಮೀರ್ ಖಾನ್​ ಸೇರಿದಂತೆ ಅನೇಕರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ರಾಮಸೇತು ಚಿತ್ರದ 45 ಸಹ ಕಲಾವಿದರಿಗೆ ನಿನ್ನೆ ಕೊರೊನಾ ದೃಢಪಟ್ಟಿತ್ತು.

Last Updated : Apr 6, 2021, 6:51 PM IST

ABOUT THE AUTHOR

...view details