ಕರ್ನಾಟಕ

karnataka

ETV Bharat / sitara

ಅಭಿನಯ ಚಕ್ರವರ್ತಿ ಸುದೀಪ್​​ಗೆ ಹಿರಿಯ ನಟ ಜಗ್ಗೇಶ್ ಕಿವಿಮಾತು...ಕೂಡಿ ಬಾಳಿದರೆ ಸ್ವರ್ಗ ಸುಖ ಎಂದಿದ್ದೇಕೆ? - ಕಿಚ್ಚ ಸುದೀಪ್

ಕನ್ನಡ ಹಿರಿಯ ನಟ ನವರಸ ನಾಯಕ ಜಗ್ಗೇಶ್​ ಅಭಿನಯ ಚಕ್ರವರ್ತಿ ಸುದೀಪ್​ಗೆ ಕಿವಿ ಮಾತೊಂದನ್ನು ಹೇಳಿದ್ದಾರೆ.

actor jaggesh

By

Published : Aug 26, 2019, 1:33 PM IST

ಕಿಚ್ಚ ಸುದೀಪ್ ಅಭಿನಯಿಸಿರುವ ಪೈಲ್ವಾನ್ ಸಿನಿಮಾ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ. ಸದ್ಯ ಟ್ರೇಲರ್ ನೋಡಿ ಮೆಚ್ಚಿಕೊಂಡಿರುವ ಜಗ್ಗೇಶ್​, ಸುದೀಪ್ ಹಾಗೂ ಪೈಲ್ವಾನ್ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ಇದರೊಂದಿಗೆ ಸುದೀಪ್ ಅವರಿಗೆ ಒಂದು ಕಿವಿ ಮಾತು ಸಹ ಹೇಳಿದ್ದಾರೆ.

ಇಂದು ಟ್ವೀಟ್ ಮಾಡಿರುವ ಜಗ್ಗೇಶ್​, ನಿಮ್ಮ ತಲೆಮಾರಿನಲ್ಲಿ ಕನ್ನಡ ಚಿತ್ರರಂಗ ಶ್ರೀಮಂತವಾಗಲಿ ಎಂದು ಆಶಿಸಿದ್ದಾರೆ. ಜತೆಗೆ ಹಳೆ ತಲೆಮಾರಿನ ಕಲಾವಿದರಿಗೂ ನಿಮ್ಮ ಜತೆ ಹೆಜ್ಜೆ ಹಾಕಿಸಿ, ಅವರ ಉದರಕ್ಕೆ ಆಸರೆಯಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದರೊಂದಿಗೆ ಸಂಕ್ಷಿಪ್ತವಾಗಿ ಮತ್ತೊಂದು ಕಿವಿ ಮಾತು ಹೇಳಿರುವ ಜಗ್ಗಣ್ಣ 'ಕೂಡಿ ಬಾಳಿದರೆ ಸ್ವರ್ಗ' ಎಂದಿದ್ದಾರೆ.

ಕೆಲ ದಿನಗಳಿಂದ ಸುದೀಪ್ ಹಾಗೂ ದರ್ಶನ್ ಅವರ ಸ್ನೇಹದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುಚಿಕು ಗೆಳಯರು ಮತ್ತೆ ಒಂದಾಗುವ ಲಕ್ಷಣಗಳು ಕಡಿಮೆ ಎನ್ನುವ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಜಗ್ಗೇಶ್ ಅವರ ಈ ಟ್ವೀಟ್ ಮಹತ್ವ ಪಡೆದುಕೊಂಡಿದೆ.

ABOUT THE AUTHOR

...view details