ಮೊನ್ನೆಯಷ್ಟೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದರ್ಶನ್ ವಿರುದ್ಧ ವಾಕ್ಸಮರ ನಡೆಸಿದ್ದರು. ದಚ್ಚು ಅವರ ಚಾಲೆಂಜಿಂಗ್ ಸ್ಟಾರ್ ಹಾಗೂ ಡಿಬಾಸ್ ಎನ್ನುವ ಬಿರುದುಗಳನ್ನು ಹೀಯಾಳಿಸಿ ವ್ಯಂಗ್ಯವಾಡಿದ್ದರು.
ಚುನಾವಣೆಯಲ್ಲಿ ವೈಯಕ್ತಿಕ ನಿಂದನೆ... ಅಭಿಮಾನಿಗಳಿಗೆ ಬುದ್ಧನ ತತ್ವ ಬೋಧಿಸಿದ ದಾಸ
ನಟ ದರ್ಶನ್ ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಅವರಿಗೆ ಹೆಗಲು ಕೊಟ್ಟು ಶ್ರಮಿಸುತ್ತಿದ್ದಾರೆ. ಅಮ್ಮನ ಗೆಲುವಿಗೆ ಪಣ ತೊಟ್ಟು ದುಡಿಯುತ್ತಿದ್ದಾರೆ. ಆದರೆ, ದಚ್ಚು ವಿರುದ್ಧ ಕೆಲವು ರಾಜಕೀಯ ಮುಖಂಡರು ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ವೈಯಕ್ತಿಕವಾಗಿ ದರ್ಶನ್ ಅವರ ತೇಜೋವಧೆ ಮಾಡಿದ್ದಾರೆ.
ಎಚ್ಡಿಕೆ ಅವರ ಈ ಮಾತುಗಳಿಗೆ ಡಿಬಾಸ್ ಅಭಿಮಾನಿಗಳು ಕೆಂಡಾಮಂಡಲರಾಗಿ, ಸಿಎಂ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ಸಿಎಂ ಅವರನ್ನು ಸಖತ್ ಅಣಕಿಸುವ ಟ್ರೋಲ್ ವಿಡಿಯೋ ವೈರಲ್ ಆಗಿದ್ದವು.
ಇದೀಗ ದಚ್ಚು ತನ್ನ ಅಭಿಮಾನಿಗಳಿಗೆ ಶಾಂತಿ ಮಂತ್ರ ಬೋಧಿಸಿದ್ದಾರೆ. 'ಈ ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು, ಕೋಪ ಏನು ಮಾಡ್ಕೊಳ್ಳಲ್ಲ ಅಂತ ಮೊದಲೇ ಹೇಳಿದ್ದೇನೆ, ಅದೇ ರೀತಿ ನನ್ನ ಪ್ರೀತಿಯ ಅಭಿಮಾನಿಗಳು ಸಹ ಏನೇ ಹೇಳಿದರೂ ಅದರ ವಿರುದ್ಧ ಪೋಸ್ಟ್, ವಿಡಿಯೋಗಳನ್ನ ಮಾಡುವ ಗೋಜಿಗೆ ಹೋಗಬೇಡಿ. ಅವೆಲ್ಲದಕ್ಕೂ ಕಿವಿಗೊಡದೆ, ಶಾಂತಿ ಕಾಪಾಡಿಕೊಂಡು ಅರಾಮಾಗಿರಬೇಕಾಗಿ ನಿಮ್ಮಲ್ಲಿ ದಾಸನ ಕಳಕಳಿ' ಎಂದು ಟ್ವಿಟರ್ನಲ್ಲಿ ಕೇಳಿಕೊಂಡಿದ್ದಾರೆ.