ಕರ್ನಾಟಕ

karnataka

ETV Bharat / sitara

ಡಿ ಬಾಸ್​ ಪ್ರಚಾರಕ್ಕೆ ಹೋಗುವುದು ಹಣಕ್ಕಲ್ಲ... ಆ ಪತ್ರಗಳಿಗಾಗಂತೆ! - ​ದರ್ಶನ್

ಕಳೆದ ಚುನಾವಣೆಯಲ್ಲಿ ದರ್ಶನ್ ಪಕ್ಷಭೇದ ಮರೆತು ಚುನಾವಣಾ ಪ್ರಚಾರ ನಡೆಸಿದ್ದರು. ಈ ಬಾರಿಯೂ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಬಿಜೆಪಿಯ ಪಿಸಿ ಮೋಹನ್ ಪರ ಕ್ಯಾಂಪೇನ್ ನಡೆಸಿದ್ದಾರೆ. ಚುನಾವಣೆಯಲ್ಲಿ ಪ್ರಚಾರದ ಪ್ರತಿಫಲವಾಗಿ ತಾವು ಏನು ಪಡೆಯುತ್ತಾರೆ ಎಂಬುದನ್ನು ದಚ್ಚು ಬಹಿರಂಗ ಪಡಿಸಿದ್ದಾರೆ.

ದರ್ಶನ್

By

Published : Apr 9, 2019, 8:23 AM IST

Updated : Apr 9, 2019, 11:39 AM IST

ಚುನಾವಣಾ ಕ್ಯಾಂಪೇನ್​ಗಳಿಗೆ ತಾರಾಪ್ರಚಾರಕರನ್ನು ಕರೆತರುವುದು ಪ್ರತಿ ಚುನಾವಣೆಯಲ್ಲಿಯೂ ನಡೆಯುತ್ತದೆ. ಎಲ್ಲಾ ರಾಜಕೀಯ ಪಕ್ಷಗಳು ಸಿನಿಮಾ ನಟ-ನಟಿಯರ ಕರೆ ತಂದು ತಮ್ಮ ಪರ ವೋಟು ಕೇಳುತ್ತವೆ.

ಹೀಗೆ ಪ್ರಚಾರಕ್ಕೆ ಬರುವ ಸೆಲಬ್ರಿಟಿಗಳು ಸಂಭಾವನೆ ಪಡೆಯಬಹುದು. ಇಲ್ಲವೇ ತಮ್ಮ ನಡುವಿನ ಆತ್ಮೀಯತೆ, ಸ್ನೇಹಕ್ಕೋಸ್ಕರ ಪ್ರಚಾರ ಕೂಡ ಮಾಡಬಹುದು. ಆದರೆ, ಚಾಲೆಂಜಿಂಗ್ ಸ್ಟಾರ್​ ದರ್ಶನ್ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ಪ್ರತಿಫಲವಾಗಿ ಏನು ಪಡೆಯುತ್ತಾರೆ ? ಎಂಬುದು ರಿವೀಲ್ ಆಗಿದೆ.

ಹೌದು, ನಿನ್ನೆ ಬೆಂಗಳೂರಿನ ಸೆಂಟ್ರಲ್ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ದಚ್ಚು ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ನೆರೆದಿದ್ದ ಸಾವಿರಾರು ಜನರೆದರು ಸಾರಥಿ ಒಂದು ಸತ್ಯ ಬಿಚ್ಚಿಟ್ಟರು. ತಾವು ಪ್ರಚಾರ ನಡೆಸುವ ಅಭ್ಯರ್ಥಿಗಳಿಂದ ಪಡೆಯುವುದೇನು ಎಂಬುದನ್ನು ರಿವೀಲ್ ಮಾಡಿದ್ರು. ಅಷ್ಟಕ್ಕೂ ದರ್ಶನ್ ಪಡೆಯುವ ದಕ್ಷಿಣೆ ಏನು ?

ದರ್ಶನ್ ಒಂದೇ ಪಕ್ಷಕ್ಕೆ ಅಂಟಿಕೊಂಡವರಲ್ಲ. ಈ ಹಿಂದೆ ಕಾಂಗ್ರೆಸ್​, ಬಿಜೆಪಿ ಪಕ್ಷಗಳ ಅಭ್ಯರ್ಥಿ ಪರ ಅವರು ಮತಯಾಚನೆ ಮಾಡಿದ್ದಾರೆ. ಯಾರು ಕರೆದರೂ ದಚ್ಚು ಪ್ರಚಾರಕ್ಕೆ ಹೋಗುತ್ತಾರೆ. ಹಾಗಂತಾ ಅವರು ದುಡ್ಡಿನ ಸಲುವಾಗಿ ಹೋಗುವುದಿಲ್ಲ. ಬದಲಾಗಿ ಎಂಪಿ, ಎಮ್​ಎಲ್​ಎಗಳಿಂದ ಒಂದು ಪತ್ರಕ್ಕಾಗಿಯಂತೆ. ರಾಜಕಾರಣಿಗಳ ಲೆಟರ್​ ಹೆಡ್​ ಇರುವ ಪತ್ರಗಳನ್ನು ತಮ್ಮ ಮನೆ ಬಳಿ ಬರುವ ನಾನಾ ಅನಾರೋಗ್ಯ ಪೀಡಿತರಿಗೆ ನೀಡುತ್ತಾರಂತೆ. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚ ಕಡಿಮೆಯಾಗುತ್ತದೆ. ಹೀಗೆ ರಾಜಕಾರಣಿಗಳ ರೆಕಮೆಂಡೇಷನ್ ಲೆಟರ್​ ಜತೆಗೆ ತಮ್ಮ ಕೈಲಾದಷ್ಟು ಸಹಾಯ(ಹಣದ ರೂಪದಲ್ಲಿ) ಮಾಡಿ ಬಡವರಿಗೆ ನೆರವಾಗುತ್ತಾರಂತೆ. ಹೀಗೆ ಪರೋಪಕಾರಕ್ಕಾಗಿ ಪಚಾರಕ್ಕೆ ಹೋಗುವ ದರ್ಶನ್ ಇಷ್ಟು ದಿನಗಳ ವರೆಗೆ ಈ ವಿಚಾರವನ್ನು ಬಹಿರಂಗ ಪಡಿಸಿರಲಿಲ್ಲ.

ಇನ್ನು ಈ ಬಾರಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ದರ್ಶನ್ ಮನೆ ಮಗನಾಗಿ ಪ್ರಚಾರ ನಡೆಸುತ್ತಿದ್ದಾರೆ. ಇದರೊಂದಿಗೆ ನಿನ್ನೆ ಬಿಜೆಪಿ ಪಿಸಿ ಮೋಹನ್ ಪರ ಕೂಡ ಮತಯಾಚನೆ ನಡೆಸಿದರು. ಕಮಲದ ಪರ ದಚ್ಚ ಅಖಾಡಕ್ಕಿಳಿದಿದ್ದಕ್ಕೆ ಕೆಲವರು ಇಲ್ಲಸಲ್ಲದ ಮಾತುಗಳನ್ನಾಡಿದ್ದರು. ಅದೇ ಕಾರಣಕ್ಕೆ ತಮ್ಮ ನಡೆಯ ಹಿಂದಿರುವ ಮಹತ್ತರವಾದ ಕಾರಣ ದರ್ಶನ್ ತೆರೆದಿಟ್ಟಿದ್ದಾರೆ.

Last Updated : Apr 9, 2019, 11:39 AM IST

ABOUT THE AUTHOR

...view details