ಕರ್ನಾಟಕ

karnataka

By

Published : Dec 17, 2020, 4:42 PM IST

ETV Bharat / sitara

ಕಸ ನಿರ್ವಹಣೆಗೆ ಶುಲ್ಕ ಬೇಡ ಎಂದು ಬಿಬಿಎಂಪಿಗೆ ಅನಿರುದ್ಧ್​​ ಮನವಿ

ಕಸ ನಿರ್ವಹಣೆಗೆ ಬಿಬಿಎಂಪಿ ಪ್ರತೀ ಮನೆಗೂ 200 ರೂ. ಕೊಡುವಂತೆ ನಿಯಮ ತಂದಿದೆ. ಆದ್ರೆ ಈ ಬಗ್ಗೆ ಹಲವು ಟೀಕೆಗಳು ಬರುತ್ತಿದ್ದು, ಜನರಿಂದ ಕಸ ನಿರ್ವಹಣೆಗೆ ಹಣ ಪಡೆಯುವುದು ಬೇಡ ಎಂದು ನಟ ಅನಿರುದ್ಧ್​ ಮನವಿ ಮಾಡಿದ್ದಾರೆ.

actor Anirudh appealed to the BBMP for no charge for garbage management
ಕಸ ನಿರ್ವಹಣೆಗೆ ಶುಲ್ಕ ಬೇಡ ಎಂದು ಬಿಬಿಎಂಪಿಗೆ ಅನಿರುದ್ಧ್​​ ಮನವಿ!

ಕಿರುತೆರೆಯಲ್ಲಿ ದೊಡ್ಡಮಟ್ಟದ ಜನಪ್ರಿಯತೆ ಹೊಂದಿರುವ ನಟ ಅನಿರುದ್ಧ್​​​​​​​, ಇತ್ತೀಚೆಗೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದರು. ಈ ವಿಚಾರವಾಗಿ ಬಿಬಿಎಂಪಿ ವಿಶೇಷ ಆಯುಕ್ತ‌ ರಣದೀಪ್‌ ಅವರನ್ನ ಭೇಟಿಯಾಗಿ ಕಸದ ಸ್ವಚ್ಛತೆ ಬಗ್ಗೆ ಚರ್ಚೆ ಮಾಡಿ ಗಮನ ಸೆಳೆದಿದ್ದರು.

ಆದರೆ ಬೆಂಗಳೂರಿನ ಪ್ರತೀ ಮನೆಗೂ ವಿದ್ಯುತ್ ಬಿಲ್, ನೀರಿನ ಬಿಲ್ ರೀತಿಯಲ್ಲೇ ಕಸದ ಬಿಲ್ ಪಡೆಯಲು ವಿಶೇಷ ಆಯುಕ್ತ ರಣದೀಪ್ ತಿಳಿಸಿದ್ದಾರೆ. ಪ್ರತೀ ಮನೆಗೆ ಇನ್ನೂರು ರೂಪಾಯಿಯಂತೆ ಶುಲ್ಕ ಪಡೆಯಲು ಸರ್ಕಾರವೇ ಅನುಮೋದನೆ ನೀಡಿದೆ.

ಇದನ್ನೂ ಓದಿ : ಬರ್ತ್​​ ಡೇ ದಿನವೇ ಅಭಿಮಾನಿಗಳಲ್ಲಿ ಶ್ರೀಮುರಳಿಯಿಂದ ಈ ಮನವಿ!

ಈ ವಿಚಾರವಾಗಿ ಪ್ರತಿಕ್ರಿಯಿಸಿರೋ ಅನಿರುದ್ಧ್​​, ಪ್ರತಿ ಮನೆ ಕಸಕ್ಕೆ 200 ರೂಪಾಯಿ ದರ ಮಾಡಿರುವುದರಿಂದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಫ್ಯಾಮಿಲಿ ಸಮೇತ ಮಾಲ್ಡೀವ್ಸ್ ಪ್ರವಾಸದಲ್ಲಿರುವ ನಟ, ಅಲ್ಲಿಂದಲೇ ಈ ನಿರ್ಧಾರ ಬೇಡ ಅಂತಾ ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಕಸ ನಿರ್ವಹಣೆ ಬಗ್ಗೆ ಬೇರೆ ರೀತಿಯ ಕ್ರಮವನ್ನ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ.

ಅನಿರುದ್ಧ್​​

ABOUT THE AUTHOR

...view details