ನಾಡಿನ ಜನತೆಗೆ ಒಂದು ಕಡೆ ದಸರಾ ಸಂಭ್ರಮವಾದರೆ, ಮತ್ತೊಂದೆಡೆ ಸ್ಯಾಂಡಲ್ವುಡ್ನಲ್ಲಿ ಸಿನಿ ಸಂಭ್ರಮ. ಈಗಾಗಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟ್ರೇಲರ್ ಹಾಗೂ ಹಾಡುಗಳಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಸಿನೆಮಾ ಸಲಗ ಇಂದೇ (ಗುರುವಾರ) ಬಿಡುಗಡೆಯಾಗಿದೆ.
ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನದ ಜೊತೆಗೆ ಅಭಿನಯ ಮಾಡಿರುವ ಈ ಸಿನೆಮಾ ರಾಜ್ಯಾದ್ಯಂತ 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಔಟ್ ಅಂಡ್ ಔಟ್ ರೌಡಿಸಂ ಕಥೆ ಆಧರಿಸಿರೋ ಈ ಸಿನಿಮಾ ನೋಡಿದ ಅಭಿಮಾನಿಗಳು ಉಘೇ ಉಘೆ ಅಂದಿದ್ದಾರೆ.
ಕೆಲಸವನ್ನ ಹುಡುಕಿಕೊಂಡು ಬೆಂಗಳೂರಿಗೆ ಬರುವ ಕೂಲಿ ಕಾರ್ಮಿಕರ ಮುಗ್ಧತನವನ್ನ, ಲೋಕಲ್ ಲೀಡರ್ಗಳು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ. ಜೊತೆಗೆ ಓದಬೇಕು ಅಂದುಕೊಂಡಿದ್ದ ಒಬ್ಬ ವಿದ್ಯಾರ್ಥಿ ಏಕೆ ರೌಡಿಯಾಗುತ್ತಾನೆ ಅನ್ನೋದು ಸಿನಿಮಾದ ಕಥಾ ಹಂದರ.
ಸಮಾಜದಲ್ಲಿ ಪೊಲೀಸ್ ಅಧಿಕಾರಿಗಳು ಹೇಗೆ ಇರ್ತಾರೆ. ರೌಡಿಗಳ ಮನಸ್ಥಿತಿ ಹೇಗಿರುತ್ತೆ. ಅಧಿಕಾರಕ್ಕಾಗಿ ಲೋಕಲ್ ಲೀಡರ್ಗಳು ಹೇಗೆಲ್ಲಾ ಮೋಸ ಮಾಡಿ ಬೆಳೆಯುತ್ತಾರೆ ಎಂಬ ಸೂಕ್ಷ್ಮ ವಿಷಯಗಳನ್ನು ದುನಿಯಾ ವಿಜಯ್ ಸಲಗ ಸಿನಿಮಾದಲ್ಲಿ ತೋರಿಸಿದ್ದಾರೆ.
ಬೆಂಗಳೂರಿನ ಕೆ. ಜಿ ರಸ್ತೆಯಲ್ಲಿರೋ ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿರುವ ಸಲಗ ಚಿತ್ರವನ್ನ ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಸಲಗ ಚಿತ್ರವನ್ನ ಕಣ್ಣು ತುಂಬಿಕೊಂಡರು. ಈ ಅಭಿಮಾನಿಗಳ ಜೊತೆಗೆ ಡಾಲಿ ಧನಂಜಯ್, ನಟಿ ಸಂಜನಾ ಆನಂದ್, ಸಂಭಾಷಣೆಕಾರ ಮಾಸ್ತಿ ಮಂಜು, ಕಾಕ್ರೋಜ್ ಸುಧೀ ಹಾಗೂ ದುನಿಯಾ ವಿಜಯ್ ಪತ್ನಿ ಕೀರ್ತಿ ಅವರು ಅಭಿಮಾನಿಗಳ ಜೊತೆ ಸಲಗ ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದಾರೆ.
ಡಾಲಿ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದ್ರೆ, ಸಂಜನಾ ಆನಂದ್ ಬೋಲ್ಡ್ ಪಾತ್ರದಲ್ಲಿ ಮಿಂಚಿಸಿದ್ದಾರೆ. ಕಾಕ್ರೋಜ್ ಸುಧೀ ಈ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಇನ್ನು ದುನಿಯಾ ವಿಜಯ್ ಪತ್ನಿ ಕೀರ್ತಿ ಕೂಡ ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ. ಇಷ್ಟು ವರ್ಷ ಕಷ್ಟ ಪಟ್ಟಿದ್ದಕ್ಕೆ ಇಂದು ಫಲ ಸಿಕ್ಕಿದೆ ಅಂತಾ ಪತಿ ನಿರ್ದೇಶನದ ಬಗ್ಗೆ ಕೊಂಡಾಡಿದ್ದಾರೆ.
ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದ ಜೊತೆಗೆ ಹಿನ್ನೆಲೆ ಮ್ಯೂಸಿಕ್ ಈ ಚಿತ್ರದ ಹೈಲೆಟ್ಸ್ ಆಗಿದೆ. ಜೊತೆಗೆ ಕ್ಯಾಮರಾಮ್ಯಾನ್ ಶಿವಾಸೇನಾ ಕೆಲಸ ಸಲಗ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಟಗರು ಸಿನಿಮಾ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಮತ್ತೊಂದು ರೌಡಿಸಂ ಸಿನಿಮಾ ಮಾಡಿ ಯಶಸ್ವಿ ನಿರ್ಮಾಪಕ ಅಂತಾ ಕರೆಯಿಸಿಕೊಂಡಿದ್ದಾರೆ.
ದುನಿಯಾ ವಿಜಯ್ ಪತ್ನಿ ಕೀರ್ತಿ ಓದಿ:ಬಹುನಿರೀಕ್ಷಿತ ಮದಗಜ ಟೀಸರ್-2 ಔಟ್; ಖಡಕ್ - ಪಂಚಿಂಗ್ ಡೈಲಾಗ್ಗಳು ಹೇಗಿದೆ ಅಂದ್ರೆ...