ಭಾರತೀಯ ಚಲನ ಚಿತ್ರರಂಗದ ಹೆಸರಾಂತ ನಟ ಅಮಿತಾಬ್ ಬಚ್ಚನ್ ಮತ್ತು ನಟಿ ಜಯ ಬಚ್ಚನ್ ಅವರ ಪುತ್ರ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅವರ ಪತಿ, ಅಭಿಷೇಕ್ ಬಚ್ಚನ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ತಾರೆಯರು ಹಾಗೂ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.
ಪತ್ನಿ, ಮಗಳೊಂದಿಗೆ ನಟ ಅಭಿಷೇಕ್ ಬಚ್ಚನ್ ಫೆಬ್ರವರಿ 5, 1976 ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದ ಅಭಿಷೇಕ್ ಬಚ್ಚನ್, 2000 ರಲ್ಲಿ 'ರೆಫ್ಯೂಜಿ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ನಂತರ 2004 ರಲ್ಲಿ 'ಧೂಮ್' ಮತ್ತು 'ಯುವ' ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಪತ್ನಿ, ಮಗಳೊಂದಿಗೆ ನಟ ಅಭಿಷೇಕ್ ಬಚ್ಚನ್ 20 ಏಪ್ರಿಲ್ 2007 ರಲ್ಲಿ ಐಶ್ವರ್ಯ ರೈ ಜೊತೆ ದಕ್ಷಿಣ ಭಾರತದ ಬಂಟ್ ಸಮುದಾಯದ ಸಂಪ್ರದಾಯದ ಪ್ರಕಾರ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟನಿಗೆ ಆರಾಧ್ಯ ಎಂಬ ಮಗಳಿದ್ದಾಳೆ.
ಪತ್ನಿ, ಮಗಳೊಂದಿಗೆ ನಟ ಅಭಿಷೇಕ್ ಬಚ್ಚನ್ 'ಕುಚ್ ನ ಕಹೋ', 'ಬಂಟಿ ಔರ್ ಬಬ್ಲಿ' , 'ಸರ್ಕಾರ್', 'ಬ್ಲಫ್‌ಮಾಸ್ಟರ್','ರಾವಣ' ಸೇರಿದಂತೆ ಅನೇಕ ಸಿನಿಮಾಗಳು ಹಾಗೂ ವೆಬ್ ಸರಣಿಗಳಲ್ಲಿ ಅಭಿಷೇಕ್ ಬಚ್ಚನ್ ಅಭಿನಯಿಸಿದ್ದಾರೆ. ಜೊತೆಗೆ ಫಿಲ್ಮ್‌ಫೇರ್ ಪ್ರಶಸ್ತಿ, ಅತ್ಯುತ್ತಮ ಫೀಚರ್ ಫಿಲ್ಮ್ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಅಭಿಷೇಕ್ ಬಚ್ಚನ್ , ಐಶ್ವರ್ಯ ರೈ