ಕೋಲ್ಕತ್ತಾ: 2019ರ ಲೋಕಸಭೆ ಚುನಾವಣೆಯ ಬಳಿಕ ಪಶ್ಚಿಮ ಬಂಗಾಳದಲ್ಲಿ 'ಕಮಲ'ದ ಬೇರು ಗಟ್ಟಿಗೊಳ್ಳುತ್ತಿದೆ. ಬೇರೆ ಪಕ್ಷಗಳಿಂದ ಬಿಜೆಪಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇಂದೂ ಕೂಡ ಬೆಂಗಾಲಿಯ ಹಿರಿತೆರೆ ಹಾಗೂ ಕಿರುತೆರೆಯ 13 ತಾರೆಯರು ಕಮಲ ಮುಡಿದಿದ್ದಾರೆ.
ಕಮಲ ಮುಡಿದ 12 ಬೆಂಗಾಲಿ ಜನಪ್ರಿಯ ತಾರೆಯರು... ದೀದಿ ತವರಲ್ಲಿ ಬಿಜೆಪಿಗೆ ಬಲ - ಲೋಕಸಭೆ ಚುನಾವಣೆ
ಪಶ್ಚಿಮ ಬಂಗಾಳದ 12 ಖ್ಯಾತ ನಟ-ನಟಿಯರು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವವರ ಸಂಖ್ಯೆ ಹೆಚ್ಚಲಿದೆ ಎಂದು ಬಿಜೆಪಿ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ನೇತೃತ್ವದಲ್ಲಿ ಇಂದು ಕಾರ್ಯಕ್ರಮದಲ್ಲಿ 12 ನಟ-ನಟಿಯರು ಬಿಜೆಪಿ ಸೇರ್ಪಡೆಗೊಂಡರು. ಈ ಮೊದಲು ಸಿಎಂ ಮಮತಾ ಬ್ಯಾನರ್ಜಿಯ ಟಿಎಂಸಿ ಬೆಂಬಲಿಸಿದ್ದ ರಿಷಿ ಕೌಶಿಕ್, ಪರ್ನೊ ಮಿತ್ರ, ಕಾಂಚನಾ ಮುಯಿತ್ರಾ, ರೂಪಾ ಭಟ್ಟಾಚಾರ್ಯ, ಅಂಜನಾ ಬಸು ಹಾಗೂ ಕೌಶಿಕ್ ಚಕ್ರವರ್ತಿ ಈಗ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿಕೊಂಡರು.
ಕಾರ್ಯಕ್ರಮದಲ್ಲಿ ಮಾತಾಡಿರುವ ಘೋಷ್, ಟಿಎಂಸಿ ವಿರುದ್ಧ ಹರಿಹಾಯ್ದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಮೆಚ್ಚಿ ಹೆಚ್ಚಿನ ಜನ ಬಿಜೆಪಿಯತ್ತ ಬರುತ್ತಿದ್ದಾರೆ. ಆದರೆ, ಇದನ್ನು ಟಿಎಂಸಿ ನಾಯಕರು ಸಹಿಸಿಕೊಳ್ಳುತ್ತಿಲ್ಲ. ಅವರು ಕಮಲ ಪಕ್ಷಕ್ಕೆ ಸೇರಲು ಬಯಸುವ ನಾಯಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.