ಕರ್ನಾಟಕ

karnataka

ETV Bharat / sitara

ಮುಂಬೈನ ಕಿರುತೆರೆ ನಟಿ ದಿವ್ಯಾ ಭಟ್ನಾಗರ್​ ಕೊರೊನಾಗೆ ಬಲಿ - ಮುಂಬೈನ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಕೊರೊನಾದಿಂದ ಸಾವು

ಸ್ಟಾರ್​ ಪ್ಲಸ್​ನಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಯೆ ರಿಶ್ತಾ ಕ್ಯಾ ಕೆಹೆತಾ ಹೈ' ನಲ್ಲಿ ನಟಿಸಿದ್ದ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಕೊರೊನಾ ಸೋಂಕು ಹಾಗೂ ತೀವ್ರ ಅನಾರೋಗ್ಯದಿಂದ ಇಂದು ಮುಂಬೈನಲ್ಲಿ ಅಸುನೀಗಿದ್ದಾರೆ. ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು.

Yeh Rishta Kya Kehlata Hai actor Divya Bhatnagar no more
ದಿವ್ಯಾ ಭಟ್ನಾಗರ್ ಕೊರೋನಾಗೆ ಬಲಿ

By

Published : Dec 7, 2020, 1:14 PM IST

ಮುಂಬೈ:ಕೋವಿಡ್​- 19 ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಕಿರುತೆರೆ ನಟಿ ದಿವ್ಯಾ ಭಟ್ನಾಗರ್​ (34) ಅವರು ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆ ಅವರನ್ನು ಕಳೆದ ನವೆಂಬರ್​​​ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವಾರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಈ ಹಿನ್ನೆಲೆ ದಿವ್ಯಾ ಕುಟುಂಬ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿತ್ತು.ನವೆಂಬರ್‌ನಲ್ಲಿ ದಿವ್ಯಾ ಸ್ಥಿತಿ ಗಂಭೀರವಾದ ಕಾರಣ ನಾನು ಮತ್ತು ನನ್ನ ಮಗ ದೆಹಲಿಯಿಂದ ಮುಂಬೈಗೆ ಬಂದೆವು ಎಂದು ದಿವ್ಯಾ ತಾಯಿ ತಿಳಿಸಿದ್ದಾರೆ.

ದಿವ್ಯಾ ಭಟ್ನಾಗರ್​​ ಹಾಸ್ಯ ಕಾರ್ಯಕ್ರಮವಾದ 'ತೇರಾ ಯಾರ್ ಹೂ ಮೇ' ನಲ್ಲಿ ಅವರು ರೀನಾ ಅಗರ್ವಾಲ್ ಪಾತ್ರ ಮಾಡುತ್ತಿದ್ದರು. ಆದರೆ ತೀವ್ರ ಅನಾರೋಗ್ಯ ಹಿನ್ನೆಲೆ ಶೋ ಶೂಟಿಂಗ್​ ಸೆಟ್​ನಿಂದಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ದಿವ್ಯಾ ಭಟ್ನಾಗರ್​ 'ಯೆ ರಿಶ್ತಾ ಕ್ಯಾ ಕೆಹೆತಾ ಹೈ', ಸಂಸ್ಕಾರ್, ಉಡಾನ್, ಜೀತ್ ಗೈ ತೋಹ್ ಪಿಯಾ ಮೊರೆ, ವಿಶ್ ಮತ್ತು ಸ್ಯಾನ್ವೇರ್ ಸಬ್ಕೊ ಪ್ರೀತೋ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.

ಇನ್ನು ದೇವೊಲೀನಾ ಭಟ್ಟಾಚಾರ್​ ಸೇರಿದಂತೆ ಅವರ ಅನೇಕ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮೃತ ದಿವ್ಯಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ABOUT THE AUTHOR

...view details