ಕರ್ನಾಟಕ

karnataka

ETV Bharat / sitara

64ನೇ ವಸಂತಕ್ಕೆ ಕಾಲಿಟ್ಟ ಅಮೃತಾ ಸಿಂಗ್: ಫೋಟೋದಲ್ಲಿ ನೂಲಿನಂತೆ ಸೀರೆ ತಾಯಿಯಂತೆ ಮಗಳಾದ ಸಾರಾ! - ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಮಕ್ಕಳು

ಅಮೃತಾ ಸಿಂಗ್ 64ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಹುಟ್ಟುಹಬ್ಬದ ಹಿನ್ನೆಲೆ ಪುತ್ರಿ ಸಾರಾ ಅಲಿ ಖಾನ್ ಶುಭಾಶಯ ಕೋರಿದ್ದಾರೆ. ಅವರ ಹಳೆ ಫೋಟೋಗಳನ್ನು ಸಂಗ್ರಹಿಸಿ ವಿಶೇಷ ಪೋಸ್ಟ್ ಹಾಕಿಕೊಂಡಿದ್ದಾರೆ.

Watch: On Amrita Singh's birthday, Sara shares 'Like Mother, Like Daughter' pictures
Watch: On Amrita Singh's birthday, Sara shares 'Like Mother, Like Daughter' pictures

By

Published : Feb 9, 2022, 5:20 PM IST

ಮುಂಬೈ (ಮಹಾರಾಷ್ಟ್ರ):ಇಂದು ನಟಿ ಅಮೃತಾ ಸಿಂಗ್ ಅವರ ಜನ್ಮದಿನ. ಈ ದಿನದ ಹಿನ್ನೆಲೆ ಮಗಳು ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್​ವೊಂದನ್ನು ಹಾಕಿಕೊಂಡಿದ್ದಾರೆ.

64ನೇ ವಸಂತಕ್ಕೆ ಕಾಲಿಟ್ಟ ಅಮೃತಾ ಸಿಂಗ್

ಇನ್‌ಸ್ಟಾಗ್ರಾಮ್​ನಲ್ಲಿ ತಾಯಿ ಬಗ್ಗೆ ಸಾರಾ, ಹುಟ್ಟು ಹಬ್ಬದ ಶುಭಾಶಯಗಳು ಮಮ್ಮಿ ಎಂದು ಬರೆದುಕೊಂಡಿದ್ದು, ಸಾರಾ ತನ್ನ ಜೊತೆ ತಾಯಿಯ ಹಳೆ ಫೋಟೋಗಳನ್ನು ಸಂಗ್ರಹಿಸಿ ವಿಶೇಷ ಪೋಸ್ಟ್ ಹಾಕಿಕೊಂಡಿದ್ದಾರೆ. ಥೇಟ್​ ತಾಯಿ ಅಮೃತಾ ಸಿಂಗ್ ಅವರಂತೆ ಸಾರಾ ಕಂಗೊಳಿಸುತ್ತಿದ್ದಾರೆ.

ತಾಯಿಯ ಹುಟ್ಟುಹಬ್ಬದ ಹಿನ್ನೆಲೆ ವಿಶೇಷ ಪೋಸ್ಟ್​ ಹಂಚಿಕೊಂಡ ಸಾರಾ

ಸಾರಾ ಅಲಿ ಖಾನ್​ ಬಾಲಿವುಡ್​ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಮಗಳು. 1991ರಲ್ಲಿ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಮದುವೆಯಾಗಿದ್ದು 2004 ರಲ್ಲಿ ವಿವಾಹ ವಿಚ್ಛೇದನ ತೆಗೆದುಕೊಳ್ಳುವ ಮೂಲಕ ತಮ್ಮ 13 ವರ್ಷಗಳ ಸಂಬಂಧಕ್ಕೆ ಕೊನೆ ಹಾಡಿದ್ದರು.

ಸಹೋದರನೊಂದಿಗೆ ಸಾರಾ

ಇನ್ನು ಅಮೃತಾ ಸಿಂಗ್ ಅವರು ಮಾಜಿ ಪತಿ ಸೈಫ್ ಅಲಿ ಖಾನ್ ಅವರಿಂದ ಇಬ್ರಾಹಿಂ ಅಲಿ ಖಾನ್ ಎಂಬ ಮಗನನ್ನು ಹೊಂದಿದ್ದು, ಸದ್ಯ ಎಲ್ಲರೂ ಆಪ್ತರಾಗಿಯೇ ಇದ್ದಾರೆ. ಪುತ್ರಿ ಸಾರಾ ಅಲಿ ಖಾನ್​ ಈಗಾಗಲೇ ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿ ಗುರುಸಿಕೊಂಡಿದ್ದಾರೆ.

ABOUT THE AUTHOR

...view details