ಕರ್ನಾಟಕ

karnataka

ETV Bharat / sitara

ನಟಿ ವಿದ್ಯಾ ಬಾಲನ್ ಹೊಸ ಚಿತ್ರದ ಪೋಸ್ಟ​ರ್​ ವೈರಲ್​ - ಶಿರ್ಷಾ ಗುಹಾ ಠಾಕುರ್ತಾ

ನಟಿ ವಿದ್ಯಾ ಬಾಲನ್ (Vidya Balan) ಅವರ ಹೊಸ ಚಿತ್ರದ ಪೋಸ್ಟ್​ರ್​ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದೆ. ಶೀಘ್ರದಲ್ಲೇ ಶೀರ್ಷಿಕೆಯ ಪ್ರಕಟಣೆಗಾಗಿ ನಿರೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ.

Vidya Balan, Pratik Gandhi, Ileana D'Cruz, Sendhil Ramamurthy team up for new rom-com
Vidya Balan, Pratik Gandhi, Ileana D'Cruz, Sendhil Ramamurthy team up for new rom-com

By

Published : Nov 11, 2021, 2:28 PM IST

ಮುಂಬೈ:'ಮಿಷನ್ ಮಂಗಲ್' ಚಿತ್ರದಲ್ಲಿ ವಿಜ್ಞಾನಿಯಾಗಿ ಅಭಿನಯಿಸಿದ್ದ ಸೀರೆ ಸುಂದರಿ ಬಾಲಿವುಡ್​ ನಟಿ ವಿದ್ಯಾ ಬಾಲನ್ (Vidya Balan) ಇದೀಗ ಮತ್ತೊಂದು ವಿಭಿನ್ನ ಚಿತ್ರದ ಮೂಲಕ ಮರಳಿದ್ದಾರೆ.

ಇಲಿಯಾನಾ ಡಿ'ಕ್ರೂಜ್, ಪ್ರತೀಕ್ ಗಾಂಧಿ ಮತ್ತು ಭಾರತ - ಅಮೆರಿಕನ್ ನಟ ಸೆಂಧಿಲ್ ರಾಮಮೂರ್ತಿ ಅವರೊಂದಿಗೆ ಪರದೆ ಹಂಚಿಕೊಳ್ಳಲಿರುವ ನಟಿ ವಿದ್ಯಾ ಬಾಲನ್​ ಇನ್ನು ಹೆಸರಿಡದ ಚಿತ್ರದ ಬಗ್ಗೆ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಚಿತ್ರದ ಕಥೆವು ಹಾಸ್ಯದ ಜೊತೆಗೆ ರೊಮ್ಯಾಂಟಿಕ್​ನಿಂದ ಕೂಡಿದೆ ಎಂದು ಹೇಳಲಾಗುತ್ತಿದ್ದು ಇದನ್ನು ಜಾಹೀರಾತು ತಯಾರಕ ಶಿರ್ಷಾ ಗುಹಾ ಠಾಕುರ್ತಾ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಮುಂಬೈ ಮತ್ತು ಊಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಹೊಸ ಸಿನಿಮಾ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ವಿದ್ಯಾ ಬಾಲನ್, ಇವರೊಂದಿಗೆ ನನ್ನ ಮುಂದಿನ ಸಿನಿಮಾ ಜರ್ನಿ ಮತ್ತೆ ಆರಂಭವಾಗುತ್ತಿದೆ. ಇದು ನಿಮ್ಮ ಹಾಗೂ ನಿಮ್ಮ ಸ್ನೇಹಿತನ ಕಥೆಯಾಗಿದ್ದು, ಚಿತ್ರವು ನಿಮ್ಮನ್ನು ನಗಿಸಬಹುದು ಹಾಗೆಯೇ ಅಳುಸುವಂತೆಯೂ ಮಾಡಬಹುದು. ಶೀಘ್ರದಲ್ಲೇ ಶೀರ್ಷಿಕೆಯ ಪ್ರಕಟಣೆಗಾಗಿ ನಿರೀಕ್ಷಿಸಿ ಎಂದು ಬರೆದು ಕೊಂಡಿದ್ದಾರೆ.

ಎಪ್ಲೀಜರ್​ ಎಂಟರ್‌ಟೈನ್‌ಮೆಂಟ್ ಮತ್ತು ಎಲಿಪ್ಸಿಸ್ ಎಂಟರ್‌ಟೈನ್‌ಮೆಂಟ್ (Applause Entertainment and Ellipsis Entertainment) ಸಹಯೋಗದೊಂದಿಗೆ ಚಿತ್ರ ತಯಾರಾಗುತ್ತಿದೆ. ನಿರ್ದೇಶ ಶಿರ್ಷಾ ಗುಹಾ ಠಾಕುರ್ತಾ ಕೂಡ ಜಾಲತಾಣದಲ್ಲಿ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details