ಮುಂಬೈ: ಬಾಲಿವುಡ್‌ನಲ್ಲಿ ಲೈಂಗಿಕ ಭಕ್ಷಕರೇ ಇದ್ದಾರೆ ಎಂದು ಹೇಳಿಕೆ ನೀಡಿದ್ದ ಕಂಗನಾ ರಣಾವತ್ ಈಗ ಮತ್ತೊಂದು ರೀತಿಯಲ್ಲಿ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಅವರು ತಮ್ಮ ಎಲ್ಲ ಜೊತೆಗಾರರಿಗೂ ಮೋಸ ಮಾಡಿದ್ದಾರೆ. ನನಗೆ ತಿಳಿದಿರುವಂತೆ ಅನುರಾಗ್ ಬೇರೆ ಬೇರೆ ಯುವತಿಯರನ್ನು ಮದುವೆ ಆದಾಗಲೂ ಏಕಪತ್ನಿತ್ವ ಹೊಂದಿರಲಿಲ್ಲ. ಅನುರಾಗ್ ಅವರು ಪಾಯಲ್‌ಗೆ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಹೊರಗಿನ ಹೆಣ್ಣುಮಕ್ಕಳನ್ನು ಲೈಂಗಿಕ ಕಾರ್ಯಕರ್ತೆಯರಂತೆ ನಡೆಸಿಕೊಳ್ಳುವುದು ಅವರಿಗೆ ಸಹಜ ಎಂದು ಟ್ವೀಟ್ ಮೂಲಕ ಆರೋಪಿಸಿದ್ದಾರೆ.