ಕರ್ನಾಟಕ

karnataka

ETV Bharat / sitara

ಎರಡನೇ ಬಾರಿಗೆ ಐಎಫ್‌ಪಿಐ ಪ್ರಶಸ್ತಿಗೆ ಭಾಜನರಾದ ಟೇಲರ್ ಸ್ವಿಫ್ಟ್ - ಐಎಫ್‌ಪಿಐ ಗ್ಲೋಬಲ್ ರೆಕಾರ್ಡಿಂಗ್ ಆರ್ಟಿಸ್ಟ್ ಆಫ್ ದಿ ಇಯರ್ ಪ್ರಶಸ್ತಿ

2019 ರಲ್ಲಿ ಟೇಲರ್ ಸ್ವಿಫ್ಟ್​ ಅವರ ಹಾಡುಗಳು ವಿಶ್ವದಲ್ಲಿಯೇ ಅತೀ ಹೆಚ್ಚು ಮಾರಾಟವಾಗಿವೆ. ಜೊತೆಗೆ ಐಎಫ್‌ಪಿಐ ಗ್ಲೋಬಲ್ ರೆಕಾರ್ಡಿಂಗ್ ಆರ್ಟಿಸ್ಟ್ ಆಫ್ ದಿ ಇಯರ್ ಪ್ರಶಸ್ತಿಗೆ ಟೇಲರ್ ಸ್ವಿಫ್ಟ್ ಎರಡನೇ ಬಾರಿಗೆ ಭಾಜನರಾಗಿದ್ದಾರೆ.

Taylor Swift named world's best-selling artist
ಟೇಲರ್ ಸ್ವಿಫ್ಟ್

By

Published : Mar 3, 2020, 11:49 AM IST

ಲಂಡನ್​​: ಐಎಫ್‌ಪಿಐ ಗ್ಲೋಬಲ್ ರೆಕಾರ್ಡಿಂಗ್ ಆರ್ಟಿಸ್ಟ್ ಆಫ್ ದಿ ಇಯರ್ ಪ್ರಶಸ್ತಿಗೆ ಟೇಲರ್ ಸ್ವಿಫ್ಟ್ ಎರಡನೇ ಬಾರಿಗೆ ಭಾಜನರಾಗಿದ್ದಾರೆ. 2014 ರಲ್ಲಿ ಈ ಪ್ರಶಸ್ತಿ ಪಡೆದಿದ್ದ ಬಿಲ್ಲಿ ಎಲಿಶ್ ಮತ್ತು ಕ್ವೀನ್ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದಾರೆ.

2019 ರಲ್ಲಿ ಟೇಲರ್​ ಸ್ವಿಫ್ಟ್​ ಅವರ ಹಾಡುಗಳು ವಿಶ್ವದಲ್ಲಿಯೇ ಅತೀ ಹೆಚ್ಚು ಮಾರಾಟವಾಗಿವೆ. ಐಎಫ್‌ಪಿಐ ಜಾಗತಿಕವಾಗಿ ರೆಕಾರ್ಡಿಂಗ್​ ಸಂಗೀತ ಉದ್ಯಮವನ್ನು ಪ್ರತಿನಿಧಿಸುವ ಸಂಸ್ಥೆಯಾಗಿದ್ದು, ಟೇಲರ್​ ಎರಡನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸ್ವಿಫ್ಟ್​ ಅವರು ತಮ್ಮ ಏಳನೇ ಸ್ಟುಡಿಯೋ ಆಲ್ಬಂ 'ಲವರ್​​​'ನನ್ನು ಆಗಸ್ಟ್​​ನಲ್ಲಿ ಬಿಡುಗಡೆ ಮಾಡಿದ್ರು. ಇದು ಒಂದು ವಾರದೊಳಗೆ ಮೂರು ಮಿಲಿಯನ್​​ಗೂ ಹೆಚ್ಚು ಮಾರಾಟವಾಗಿತ್ತು. ಸುಮಾರು 10 ಕ್ಕೂ ಹೆಚ್ಚು ದೇಶಗಳಲ್ಲಿ ಈ ಆಲ್ಬಂ ಪ್ರಥಮ ಸ್ಥಾನ ಪಡೆದಿದೆ.

ಎಡ್ ಶೀರನ್ ಅವರು ಸಂಸ್ಥೆಯ ಅಗ್ರ 10 ಸ್ಥಾನಗಳಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. "ಸನ್​​ಫ್ಲವರ್​​​" ಮತ್ತು "ಹಾಲಿವುಡ್‌ ಬ್ಲೀಡಿಂಗ್​" ಆಲ್ಬಂನ ಮಾರಾಟದ ನಂತರ ಪೋಸ್ಟ್ ಮ್ಯಾಲೋನ್ ಮೂರನೇ ಸ್ಥಾನದಲ್ಲಿದ್ದ, ಬಿಲ್ಲಿ ಎಲಿಶ್ ಮತ್ತು ಕ್ವೀನ್ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದಾರೆ.

2019 ರ ಐಎಫ್‌ಪಿಐ ಟಾಪ್ 10 ಗ್ಲೋಬಲ್ ರೆಕಾರ್ಡಿಂಗ್ ಕಲಾವಿದರು:

1. ಟೇಲರ್ ಸ್ವಿಫ್ಟ್

2. ಎಡ್ ಶೀರನ್

3. ಪೋಸ್ಟ್ ಮ್ಯಾಲೋನ್

4. ಬಿಲ್ಲಿ ಎಲಿಶ್

5. ಕ್ವೀನ್​​​

6. ಅರಿಯಾನ ಗ್ರಾಂಡೆ

7. ಬಿಟಿಎಸ್

8. ಡ್ರೇಕ್

9. ಲೇಡಿ ಗಾಗಾ

10. ದ ಬೀಟಲ್ಸ್

ABOUT THE AUTHOR

...view details