ಮುಂಬೈ:ಉತ್ತರ ಭಾರತದ ಸಣ್ಣ ಪಟ್ಟಣವೊಂದರ ಕಥಾಹಂದರವಿಟ್ಟುಕೊಂಡು ನಿರ್ಮಾಣವಾಗುತ್ತಿರುವ 'ಹಸೀನ್ ದಿಲ್‌ರುಬಾ' ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಇಂದು ಬಿಡುಗಡೆಯಾಗಿದೆ. ವಿನಿಲ್ ಮ್ಯಾಥ್ಯೂ ನಿರ್ದೇಶನದ ಈ ಚಿತ್ರವನ್ನು ಆನಂದ್ ಎಲ್. ರಾಯ್ ಅವರ ಕಲರ್ ಯೆಲ್ಲೋ ಪ್ರೊಡಕ್ಷನ್ಸ್ ಇರೋಸ್ ಇಂಟರ್ನ್ಯಾಷನಲ್ ಮತ್ತು ಹಿಮಾಂಶು ಶರ್ಮಾ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಕೊರೊನಾ ಸಮಯದಲ್ಲಿ ಹಸೀನ್ ದಿಲ್‌ರುಬಾ ಚಿತ್ರೀಕರಿಸಲಾಗಿದ್ದು, ಜುಲೈ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ನಟಿ ತಾಪ್ಸಿ ಪನ್ನು, "ಹಸೀನ್ ದಿಲ್ರುಬಾ ಸಿನಿಮಾದ ಕಥೆ ಕೇಳಿ ತುಂಬಾ ಉತ್ಸುಕನಾದೆ. ಈ ಚಿತ್ರಕ್ಕೆ ನಾನು ಮೊದಲು ಆಯ್ಕೆಯಾಗಿಲ್ಲ. ನಿಮಗಾಗಿಯೇ ಎಂದು ಬರೆದಿದ್ದರೆ ಅದು ನಿಮ್ಮ ಬಳಿಗೆ ಬಂದೇ ಬರುತ್ತದೆ ಎಂಬ ಹಿರಿಯರ ಮಾತು ನಿಜವಾಗಿದೆ. ಇದು ಕೇವಲ ಸುಂದರವಾಗಿ ಬರೆದ ರಹಸ್ಯ ಕಥೆಯಲ್ಲ. ಇದರಲ್ಲಿ ಅದ್ಭುತ ಪಾತ್ರಗಳಿವೆ"ಎಂದು ತಾಪ್ಸಿ ಹೇಳಿದರು.