ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್' ಸಿನಿಮಾ ನಂತರ ಇದೀಗ ಬಾಲಿವುಡ್ನಲ್ಲಿ 'ರಶ್ಮಿ ರಾಕೆಟ್' ಎಂಬ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಸಿನಿಮಾಗಾಗಿ ತಾವು ತರಬೇತಿ ಪಡೆಯುತ್ತಿರುವ ಕೆಲವೊಂದು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
'ರಶ್ಮಿ ರಾಕೆಟ್' ಚಿತ್ರಕ್ಕಾಗಿ ತರಬೇತಿ ಪಡೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡ ತಾಪ್ಸಿ ಪನ್ನು - Taapsee training for next movie
ತಮ್ಮ ಮುಂದಿನ ಸಿನಿಮಾ 'ರಶ್ಮಿ ರಾಕೆಟ್' ಚಿತ್ರಕ್ಕಾಗಿ ತಾಪ್ಸಿ ಪನ್ನು ಭಾರೀ ಶ್ರಮ ಪಡುತ್ತಿದ್ದಾರೆ. ಸ್ಟೇಡಿಯಂನಲ್ಲಿ ತರಬೇತಿ ಪಡೆಯುತ್ತಿರುವ ಫೋಟೋಗಳನ್ನು ತಾಪ್ಸಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋಗಳಲ್ಲಿ ತಾಪ್ಸಿ, ವರ್ಕೌಟ್ ಔಟ್ಫಿಟ್ನಲ್ಲಿದ್ದು ವ್ಯಕ್ತಿಯೊಬ್ಬರು ಪಿಂಕ್ ನಟಿಗೆ ತರಬೇತಿ ನೀಡುತ್ತಿದ್ದಾರೆ. ಎರಡು ಚಿತ್ರಗಳಲ್ಲಿ ತಾಪ್ಸಿ ಜಂಪಿಂಗ್ ಭಂಗಿಯಲ್ಲಿದ್ದರೆ ಮತ್ತೊಂದು ಚಿತ್ರದಲ್ಲಿ ಓಡುವ ಪ್ರಯತ್ನದಲ್ಲಿದ್ದಾರೆ. ತಮ್ಮ ಫೋಟೋಗಳಿಗೆ ' ಹೊಪ್, ಸ್ಕಿಪ್, ರನ್...ರಿಪೀಟ್ # ರಶ್ಮಿ ರಾಕೆಟ್ ' ಎಂದು ಕ್ಯಾಪ್ಷನ್ ನೀಡಿದ್ದಾರೆ. ತಾಪ್ಸಿ ಸದ್ಯಕ್ಕೆ ಹಸೀನ್ ದಿಲ್ರುಬ, ತಪ್ಪಡ್ ಸಿನಿಮಾಗಳಲ್ಲಿ ಬ್ಯುಸಿ ಇದ್ದು ಈ ಸಿನಿಮಾಗಳ ನಂತರ ' ರಶ್ಮಿ ರಾಕೆಟ್' ಚಿತ್ರೀಕರಣ ಆರಂಭವಾಗಲಿದೆ. ' ರಶ್ಮಿ ರಾಕೆಟ್' ಕ್ರೀಡೆಗೆ ಸಂಬಂಧಿಸಿದ ಸಿನಿಮಾ. ಕ್ರೀಡೆಯಲ್ಲಿ ಆಸಕ್ತಿ ಇರುವ ಪುಟ್ಟ ಗ್ರಾಮವೊಂದರ ರಶ್ಮಿ ಎಂಬ ಹುಡುಗಿ ಅಥ್ಲೆಟಿಕ್ಸ್ಗೆ ಬರುವ ಕಥೆ ಹೊಂದಿರುವ ಈ ಚಿತ್ರವನ್ನು ಆಕರ್ಷ್ ಖುರಾನಾ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ರೋನಿ ಸ್ಕ್ರುವಾಲ ಬಂಡವಾಳ ಹೂಡಿದ್ದಾರೆ.