ಕರ್ನಾಟಕ

karnataka

ETV Bharat / sitara

ಕಾಂಚಿ ಚಿತ್ರದಲ್ಲಿದ್ದ ವಿನಮ್ರತೆ ಕಾರ್ತಿಕ್​ನಲ್ಲಿ ಈಗಲೂ ಇದೆ .. ಸುಭಾಶ್ ಘಾಯ್

ಕಾಂಚಿ ಬಿಡುಗಡೆಯಾಗಿ ಇಂದಿಗೆ ಏಳು ವರ್ಷಗಳಾಗಿವೆ. ಚಲನಚಿತ್ರವನ್ನು ನಿರ್ಮಿಸಿದ ತನ್ನ ಅನುಭವವನ್ನು ಹಾಗೂ ಹೊಸ ಮುಖಗಳಾದ ಕಾರ್ತಿಕ್ ಹಾಗೂ ಮಿಶ್ತಿಯನ್ನು ಸಿನಿಮಾಕ್ಕೆ ಹಾಕಿಕೊಂಡು ಹೇಗೆ ಅಪಾಯವನ್ನು ತೆಗೆದುಕೊಂಡರು ಎಂದು ಘಾಯ್ ತಿಳಿಸಿದ್ದಾರೆ.

Kartik Aaryan
Kartik Aaryan

By

Published : Apr 25, 2021, 4:07 PM IST

ಹೈದರಾಬಾದ್:ದೋಸ್ತಾನ 2 ನಿಂದ ಹೊರಬಂದ ಬಳಿಕ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸದ್ಯ ಟ್ಯಾಬ್ಲಾಯ್ಡ್​ಗಳಿಗೆ ಆಹಾರವಾದಂತಿದೆ. 2014 ರಲ್ಲಿ ತೆರೆಕಂಡ ನಿರ್ಮಾಪಕ ಸುಭಾಷ್ ಘಾಯ್​ ಅವರ ಚಿತ್ರವಾದ ಕಾಂಚಿ: ದಿ ಅನ್​ಬ್ರೇಕೆಬಲ್​ನಲ್ಲಿ ಹೊಸ ಪರಿಚಯವಾದ ಕಾರ್ತಿಕ್​ ವೃತ್ತಿಜೀವನ ಪಥದ ಮುನ್ನುಡಿ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾಂಚಿ ಬಿಡುಗಡೆಯಾಗಿ ಇಂದಿಗೆ ಏಳು ವರ್ಷಗಳಾಗಿವೆ. ಚಲನಚಿತ್ರವನ್ನು ನಿರ್ಮಿಸಿದ ತನ್ನ ಅನುಭವವನ್ನು ಹಾಗೂ ಹೊಸ ಮುಖಗಳಾದ ಕಾರ್ತಿಕ್ ಹಾಗೂ ಮಿಶ್ತಿಯನ್ನು ಸಿನಿಮಾಕ್ಕೆ ಹಾಕಿಕೊಂಡು ಹೇಗೆ ಅಪಾಯವನ್ನು ತೆಗೆದುಕೊಂಡರು ಎಂದು ಘಾಯ್​ ಪತ್ರಿಕೆಯೊಂದರ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕಾರ್ತಿಕ್​ನನ್ನು ಅವರ ಸಹಾಯಕ ನಿರ್ದೇಶಕ ಮತ್ತು ಕ್ಯಾಮರಾಮನ್ ಶಿಫಾರಸು ಮಾಡಿದ್ದರಂತೆ. ಆದ್ರೆ ಆ ಬಳಿಕ ಕಾರ್ತಿಕ್ ಎ-ಲಿಸ್ಟರ್‌ಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ. ಆದ್ರೆ ಮಿಶ್ತಿ ಇನ್ನೂ ತನ್ನ ಹೆಜ್ಜೆಯನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದಾಳೆ ಎಂದು ತಿಳಿಸಿದ್ದಾರೆ.

ದೋಸ್ತಾನಾ 2 ವಿವಾದವು ಕಾರ್ತಿಕ್ ಅವರನ್ನು ಕಾಡುತ್ತಿದೆ. ಕಾರ್ತಿಕ್ ಆರ್ಯನ್ ಯಾವಾಗಲೂ ನನಗೆ ಪ್ರಿಯರಾಗಿದ್ದರು. ಅವರು ಶೀಘ್ರವಾಗಿ ಕಲಿಯುವವರಾಗಿದ್ದರು ಮತ್ತು ಕಾಂಚಿ ಚಿತ್ರದ ಸಮಯದಲ್ಲಿ ಚಿತ್ರದ ನಾಯಕನಾಗಿಯೂ, ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಆತ ಇನ್ನೂ ಉತ್ತಮವಾಗಿ ಕಲಿಯುವನು, ಅಲ್ಲದೆ ಅವನು ಆಗಿನಂತೆಯೇ ವಿನಮ್ರನಾಗಿರುತ್ತಾನೆ ಎಂದು ಭಾವಿಸುತ್ತೇನೆ ಎಂದರು.

ABOUT THE AUTHOR

...view details