ಮುಂಬೈ:ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ವಲಸೆ ಕಾರ್ಮಿಕರು ತವರಿಗೆ ತೆರಳಲು ನೆರವು ನೀಡುತ್ತಿರುವ ನಟ ಸೋನು ಸೂದ್ ಅವರ ನಿಸ್ವಾರ್ಥ ಸೇವೆಯನ್ನು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಶ್ಲಾಘಿಸಿದ್ದಾರೆ.
ವಲಸಿಗರ ಹೀರೋಗೆ 'ಮಹಾ' ರಾಜ್ಯಪಾಲರ ಶ್ಲಾಘನೆ - corona
ಸಂಕಷ್ಟಕ್ಕೆ ಒಳಗಾದ ವಲಸೆ ಕಾರ್ಮಿಕರು ತವರಿಗೆ ಕಳಿಸಲು ಶ್ರಮಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್ರನ್ನು ಮಹಾರಾಷ್ಟ್ರ ರಾಜ್ಯಪಾಲರು ಶ್ಲಾಘಿಸಿದ್ದಾರೆ.
ಶನಿವಾರ ಭೇಟಿಯಾಗಿದ್ದ ಸೋನು ಸೂದ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ರಾಜ್ಯಪಾಲರು ಆಶ್ವಾಸನೆ ನೀಡಿದ್ದಾರೆ. ಸೋನು ಸೂದ್ ಭೇಟಿ ಮಾಡಿದ್ದನ್ನು ರಾಜ್ಯಪಾಲರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಲಸೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸೋನು ಸೂದ್ ವಿವರಿಸಿದ್ದಾರೆ. ಅವರ ಶ್ರಮವನ್ನು ಶ್ಲಾಘಿಸುವುದು ಮಾತ್ರವಲ್ಲದೇ ನೆರವು ನೀಡುತ್ತೇವೆ ಎಂದು ಉಲ್ಲೇಖಿಸಿದ್ದಾರೆ.
ಶುಕ್ರವಾರವಷ್ಟೇ ಸೂದ್ ಒಡಿಶಾ ಮೂಲದ 169 ಬಾಲಕಿಯರು ತಮ್ಮೂರುಗಳಿಗೆ ತೆರಳಲು ನೆರವಾಗಿದ್ದರು. ಇದರ ಜೊತೆಗೆ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ತೆರಳಲು ಸಹಾಯ ಮಾಡಿದರು. ಇವರ ಕಾರ್ಯವನ್ನು ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ರಾಜ್ಯಸಭಾ ಸದಸ್ಯ ಅಮರ್ ಪಟ್ನಾಯಕ್ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ.