ಸಾರಾ ಅಲಿಖಾನ್, ಬಾಲಿವುಡ್ನಾದ್ಯಂತ ಸದ್ಯಕ್ಕೆ ಕೇಳಿ ಬರುತ್ತಿರುವ ಹೆಸರು. ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ ಮೊದಲ ಚಿತ್ರ 'ಲವ್ ಆಜ್ಕಲ್' ಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದ್ದು ಸಾರಾ ಅಲಿಖಾನ್ಗೆ ಫ್ಯಾನ್ ಫಾಲೋವರ್ಸ್ಗಳು ಕೂಡಾ ಹೆಚ್ಚಾಗಿದ್ದಾರೆ.
ಏರ್ಪೋರ್ಟ್ ಅಧಿಕಾರಿಗಳು ನನ್ನನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದರು..ಸಾರಾ ಅಲಿಖಾನ್
ಸಾರಾ ಅಲಿಖಾನ್ ಇದಕ್ಕೂ ಮುನ್ನ ಬಹಳ ದಪ್ಪ ಇದ್ದು ಸಿನಿಮಾದಲ್ಲಿ ಅವಕಾಶ ದೊರೆತ ಬಳಿಕ ಸುಮಾರು 28 ಕಿಲೋ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಆದರೆ ಸಾರಾ ಪಾಸ್ಪೋರ್ಟಿನಲ್ಲಿ ಅವರು ದಪ್ಪಗೆ ಇದ್ದಾಗ ತೆಗೆದ ಪೋಟೋ ಇದ್ದು, ವಿದೇಶಕ್ಕೆ ಹೋದಾಗಲೆಲ್ಲಾ ಏರ್ಪೋರ್ಟ್ ಅಧಿಕಾರಿಗಳು ಅವರನ್ನು ಬಹಳ ವಿಚಿತ್ರವಾಗಿ ನೋಡುತ್ತಿದ್ದರಂತೆ.
ಸಾರಾ ಇದೀಗ ವರುಣ್ ಧವನ್ ಜೊತೆ 'ಕೂಲಿ ನಂ1' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಾರಾ ಒಂದು ಕಾಮಿಡಿ ಶೋನಲ್ಲಿ ಭಾಗವಹಿಸಿದ್ದು ಆ ಕಾರ್ಯಕ್ರಮದಲ್ಲಿ ಒಂದು ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಚೆಲುವೆ ಇದಕ್ಕೂ ಮುನ್ನ ಬಹಳ ದಪ್ಪ ಇದ್ದು ಸಿನಿಮಾದಲ್ಲಿ ಅವಕಾಶ ದೊರೆತ ಬಳಿಕ ಸುಮಾರು 28 ಕಿಲೋ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಆದರೆ ಸಾರಾ ಪಾಸ್ಪೋರ್ಟಿನಲ್ಲಿ ಅವರು ದಪ್ಪಗೆ ಇದ್ದಾಗ ತೆಗೆದ ಪೋಟೋ ಇದ್ದು, ವಿದೇಶಕ್ಕೆ ಹೋದಾಗಲೆಲ್ಲಾ ಏರ್ಪೋರ್ಟ್ ಅಧಿಕಾರಿಗಳು ಅವರನ್ನು ಬಹಳ ವಿಚಿತ್ರವಾಗಿ ನೋಡುತ್ತಿದ್ದರಂತೆ. ಅದರಲ್ಲೂ ಅಮೆರಿಕದಲ್ಲಿ ನನ್ನನ್ನು ಬಹಳ ಅನುಮಾನಾಸ್ಪದವಾಗಿ ನೋಡುತ್ತಿದ್ದರು ಎಂದು ಸಾರಾ ಹೇಳಿಕೊಂಡಿದ್ದಾರೆ. ಸಾರಾ ಮೊದಲು ಇದ್ದದ್ದಕ್ಕೂ ಈಗಿನ ಲುಕ್ಗೂ ಸಾಕಷ್ಟು ವ್ಯತ್ಯಾಸವಾಗಿರುವುದೇ ಇದಕ್ಕೆ ಕಾರಣ ಎನ್ನಬಹುದು.