ಕರ್ನಾಟಕ

karnataka

ETV Bharat / sitara

'ಚಕ್​ ಚಕ್'​ ಹಾಡಿಗೆ ವರ್ಕ್​​ಔಟ್​​ ಮಾಡಿದ ನಟಿ ಸಾರಾ ಅಲಿ ಖಾನ್​ - ವಿಡಿಯೋ - ಚಕ್​ ಚಕ್​​ ಹಾಡಿಗೆ ವ್ಯಾಯಾಮ ಮಾಡಿದ ಸಾರಾ

ಅತ್ರಂಗಿ ರೇ ಸಿನಿಮಾ ಡಿಸೆಂಬರ್ 24ರಂದು ಡಿಸ್ನಿ ಹಾಗೂ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ವಿಕ್ಕಿ ಕೌಶಲ್ ಅವರೊಂದಿಗೆ ಹೆಸರಿಡದ ರೋಮ್-ಕಾಮ್‌ನ ಚಿತ್ರೀಕರಣದಲ್ಲಿ ಸಾರಾ ಬ್ಯುಸಿಯಾಗಿದ್ದಾರೆ..

Sara Ali Khan Gives Chaka Chak Twist To Workout
'ಚಕ್​ ಚಕ್'​ ಹಾಡಿಗೆ ವ್ಯಾಯಾಮ ಮಾಡಿದ ನಟಿ ಸಾರಾ ಅಲಿ ಖಾನ್

By

Published : Dec 10, 2021, 7:39 PM IST

ಹೈದರಾಬಾದ್ :ಬಾಲಿವುಡ್​​ ನಟಿ ಸಾರಾ ಅಲಿ ಖಾನ್ ತಮ್ಮ ಮುಂಬರುವ ಚಿತ್ರ ಅತ್ರಂಗಿ ರೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದರ ನಡುವೆಯೂ ಜಿಮ್‌ಗೆ ಹೋಗುವುದನ್ನು ತಪ್ಪಿಸಿಲ್ಲ. ಹೀಗೆ ಜಿಮ್​ನಲ್ಲಿ ನಟಿ ಮೋಜು, ಮಸ್ತಿ ಮಾಡಿರುವ ವಿಡಿಯೋವನ್ನು ಜಿಮ್​ ಟ್ರೈನರ್​​ ಹಂಚಿಕೊಂಡಿದ್ದಾರೆ.

ಅಕ್ಷಯ್​ ಕುಮಾರ್​ ಜೊತೆ ಸಾರಾ ಅತ್ರಂಗಿ ರೇ ಚಿತ್ರದ ಪ್ರಚಾರಕ್ಕಾಗಿ ನವದೆಹಲಿಗೆ ತೆರಳಿದ್ದಾರೆ. ಇದನ್ನೆಲ್ಲ ಬದಿಗೊತ್ತಿ ನಿಜಾಮುದ್ದೀನ್​​​ ದರ್ಗಾದಲ್ಲಿ ನಡೆದ ಕವಾಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಗಾಯಕರೊಂದಿಗೆ ತಾವು ಹಾಡಿ ಆನಂದಿಸಿದ್ದಾರೆ. ಈ ಕುರಿತಾದ ವಿಡಿಯೋವನ್ನು ಸಾರಾ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ.

ಇತ್ತ ಸಾರಾ ಫಿಟ್ನೆಸ್ ತರಬೇತುದಾರರಾದ ನಮ್ರತಾ ಪುರೋಹಿತ್​​ ವಿಡಿಯೋವೊಂದನ್ನು ಇನ್​ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸಾರಾ ಮತ್ತು ನಮ್ರತಾ ಜಿಮ್​​ನಲ್ಲಿ ಮೋಜು, ಮಸ್ತಿ ಮಾಡಿದ್ದಾರೆ. ಜೊತೆಗೆ ಇಬ್ಬರು ಅತ್ರಂಗಿ ರೇ ಸಿನಿಮಾದ ಚಕ್‌ಚಕ್​ ಹಾಡಿಗೆ ವರ್ಕ್​​ಔಟ್​​ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅತ್ರಂಗಿ ರೇ ಸಿನಿಮಾ ಡಿಸೆಂಬರ್ 24ರಂದು ಡಿಸ್ನಿ ಹಾಗೂ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ವಿಕ್ಕಿ ಕೌಶಲ್ ಅವರೊಂದಿಗೆ ಹೆಸರಿಡದ ರೋಮ್-ಕಾಮ್‌ನ ಚಿತ್ರೀಕರಣದಲ್ಲಿ ಸಾರಾ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ:ವಿಕ್ಕಿ- ಕತ್ರಿನಾ ಜೋಡಿಗೆ ವಿಶ್​ ಮಾಡಿದ ಸಲ್ಮಾನ್​ ಖಾನ್​ ಕುಟುಂಬ

ABOUT THE AUTHOR

...view details