ಅಸ್ಸೋಂ:ತಮ್ಮ ನೆಚ್ಚಿನ ನಟನನ್ನು ನೋಡಲು ಅವರ ಮನೆ ಮುಂದೆ ಕಾಯುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ 600 ಕಿಲೋಮೀಟರ್ ಸೈಕಲ್ ತುಳಿದು ಗುವಾಹಟಿಯಲ್ಲಿದ್ದ ಬಾಲಿವುಡ್ ನಟ ಸಲ್ಮಾನ್ಖಾನ್ ಅವರನ್ನು ಭೇಟಿಯಾಗಲು ಬಂದಿದ್ದಾರೆ.
ಭೂಪೇನ್ ಲಿಕ್ಸನ್ (56) ಅವರು ಅಸ್ಸೋಂನ ಜಾಗುನ್ ಪ್ರದೇಶದ ತಮ್ಮ ಊರಾದ ತೀನ್ಸುಕಿ ಎಂಬಲ್ಲಿಂದ ಗುವಾಹಟಿವರೆಗೂ ಸೈಕಲ್ ತುಳಿದಿದ್ದಾರೆ.
ಫೆಬ್ರವರಿ 8ರಂದು ಸೈಕಲ್ ಸವಾರಿ ಮೂಲಕ ಹೊರಟು ಫೆ.13ರಂದು ಗುವಾಹಟಿ ತಲುಪಿದ್ದಾರೆ. ಗುವಾಹಟಿಯಲ್ಲಿ ನಡೆಯಲಿರುವ ಫಿಲ್ಮ್ ಫೇರ್ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಆಗಮಿಸುತ್ತಿದ್ದಾರೆ. ಅವರನ್ನು ಭೇಟಿಯಾಗುವುದು ಲಿಕ್ಸನ್ ಆಸೆಯಂತೆ.
ಲಿಕ್ಸನ್ ಅವರು ಈಗಾಗಲೇ ಹ್ಯಾಂಡಲ್ಗಳನ್ನು ಮುಟ್ಟದೆ 60 ನಿಮಿಷದಲ್ಲಿ 48 ಕಿಲೋಮೀಟರ್ ಸೈಕ್ಲಿಂಗ್ ಮಾಡಿದ್ದಾರೆ. ಈ ಸಾಧನೆಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರಿದ್ದಾರೆ.