ಹೈದರಾಬಾದ್ : ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯದ 'ಶೇರ್ನಿ' ಚಿತ್ರ ಒಟಿಟಿ ಬಿಡುಗಡೆಗೆ ಸಿದ್ಧವಾಗಿದೆ. ಈ ವರ್ಷದ ಜೂನ್‌ನಲ್ಲಿ ಚಿತ್ರ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಪ್ರಕಟಿಸಿದೆ.
ಚಿತ್ರತಂಡಹೊಸ ಪೋಸ್ಟರ್ ಹಂಚಿಕೊಂಡಿದ್ದು, ಬಿಡುಗಡೆಯ ದಿನಾಂಕವನ್ನು ಇನ್ನಷ್ಟೇ ತಿಳಿಸಬೇಕಿದೆ. ಭೂಷಣ್ ಕುಮಾರ್ ಅವರ ಟಿ-ಸೀರಿಸ್ ಮತ್ತು ವಿಕ್ರಮ್ ಮಲ್ಹೋತ್ರಾ ಅವರ ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಸಹ-ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಅಮಿತ್ ಮಸೂರ್ಕರ್ ನಿರ್ದೇಶಿಸಿದ್ದಾರೆ.
'ಶೇರ್ನಿ'ಯ ಒಟಿಟಿ ಬಿಡುಗಡೆಯನ್ನು ಪ್ರಕಟಿಸಿದ ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಈ ಚಿತ್ರದ ಹೊಸ ಪೋಸ್ಟರ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, "ಘರ್ಜಿಸಲು ಸಿದ್ಧವಾಗಿದೆ! ನಮ್ಮ ಹೊಸ ಚಿತ್ರ 'ಶೇರ್ನಿ' ಈ ಜೂನ್‌ನಲ್ಲಿ ಪ್ರೈಮ್‌ವಿಡಿಯೋದಲ್ಲಿ ಪ್ರಥಮವಾಗಿ ಪ್ರದರ್ಶನಗೊಳ್ಳಲಿದೆ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ." ಎಂದು ಬರೆಯಲಾಗಿದೆ.
ಮಾನವ-ಪ್ರಾಣಿ ಸಂಘರ್ಷವನ್ನು ಈ ಪರಿಶೋಧಿಸುವ ಚಿತ್ರದಲ್ಲಿ ವಿದ್ಯಾ ಬಾಲನ್ ಅರಣ್ಯಾಧಿಕಾರಿಯಾಗಿ ನಟಿಸಿದ್ದಾರೆ. 2020ರಲ್ಲಿ ವಿದ್ಯಾ ಬಾಲನ್ ಅಭಿನಯದ 'ಶಕುಂತಲಾ ದೇವಿ' ಚಿತ್ರ ಕೂಡಾ ಅಮೆಜಾನ್ ಪ್ರೈಮ್ನಲ್ಲಿ ಒಟಿಟಿ ಬಿಡುಗಡೆಯಾಗಿತ್ತು.