ವಿವಾದಿತ ಹೇಳಿಕೆ, ಟಾಪ್ಲೆಸ್ ಫೋಟೋಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ಮಾಡೆಲ್, ನಟಿ ಪೂನಂ ಪಾಂಡೆ ಇದೀಗ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಯಾವುದೇ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡಿಲ್ಲ ಅಥವಾ ವಿವಾದಿತ ಹೇಳಿಕೆ ನೀಡಿಲ್ಲ.
ಮದುವೆಯಾಗ್ತಿದ್ದಾರಂತೆ ಪೂನಂ ಪಾಂಡೆ...ಮಾದಕ ನಟಿ ಕೈ ಹಿಡಿಯೋ ಹುಡುಗ ಇವರೇ..! - ಮಾಡೆಲ್ ಪೂನಂ ಪಾಂಡೆ
ನಟಿ, ಮಾಡೆಲ್ ಪೂನಂ ಪಾಂಡೆ ಮದುವೆಯಾಗುತ್ತಿದ್ದಾರಂತೆ. ಬಹಳ ವರ್ಷಗಳಿಂದ ತಾವು ಪ್ರೀತಿಸುತ್ತಿದ್ದ ಸ್ಯಾಮ್ ಬಾಂಬೆ ಎನ್ನುವವರೊಂದಿಗೆ ಈಗಾಗಲೇ ಪೂನಂ ನಿಶ್ಚಿತಾರ್ಥ ಕೂಡಾ ಮಾಡಿಕೊಂಡಿದ್ದಾರಂತೆ.
ಪೂನಂ ಪಾಂಡೆ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಇದೇ ವಿಚಾರ ಇದೀಗ ಗುಲ್ಲೆದ್ದಿದೆ. ಪೂನಂ ಪಾಂಡೆ, ತಾವು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಸ್ಯಾಮ್ ಬಾಂಬೆ ಜೊತೆ ಈಗಾಗಲೇ ನಿಶ್ಚಿತಾರ್ಥ ಕೂಡಾ ಮಾಡಿಕೊಂಡಿದ್ದಾರಂತೆ. ನಿಶ್ಚಿತಾರ್ಥದಂದು ತನ್ನ ಭಾವಿ ಪತಿಗೆ ಚುಂಬನ ನೀಡಿರುವ ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋಗಳು ಪೂನಂ ಪಾಂಡೆಗೆ ಬಹಳ ಇಷ್ಟವಂತೆ.
ಪೂನಂ ಪಾಂಡೆ ನಟಿಸಿರುವುದು ಮಾತ್ರ ಬೆರಳೆಣಿಕೆ ಸಿನಿಮಾಗಳಲ್ಲಿ. 'ನಶಾ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಪೂನಂ ಪಾಂಡೆ, ನಂತರ 2014ರಲ್ಲಿ 'ಲವ್ ಇಸ್ ಪಾಯ್ಸನ್' ಕನ್ನಡ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು. ನಂತರ 'ಮಾಲಿನಿ ಅ್ಯಂಡ್ ಕೊ.' ತೆಲುಗು ಸಿನಿಮಾ. ಇದಾದ ಬಳಿಕ 'ಆಗಯಾ ಹೀರೋ' ಹಾಗೂ 'ದಿ ಜರ್ನಿ ಆಫ್ ಕರ್ಮ' ಹಿಂದಿ ಸಿನಿಮಾಗಳು ಸೇರಿ ಇದುವರೆಗೂ 5 ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಪೂನಂ ಪಾಂಡೆ ಮದುವೆಯಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿರುವುದಂತೂ ನಿಜ.