ಕರ್ನಾಟಕ

karnataka

ETV Bharat / sitara

ಇರ್ಫಾನ್​ ಖಾನ್​ ಸಾವು  ತುಂಬಲಾರದ ನಷ್ಟ: ನಮೋ ಟ್ವೀಟ್​​ - ಬಾಲಿವುಡ್​ ನಟ ಇರ್ಫಾನ್​ ಖಾನ್​

ನಟ ಇರ್ಫಾನ್​ ಖಾನ್​ ಸಾವಿಗೆ ವಿವಿಧ ಗಣ್ಯರು ಕಂಬನಿ ಮಿಡಿದಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್​ ಮಾಡಿದ್ದಾರೆ.

pm modi tweet on Irrfan Khan death
pm modi tweet on Irrfan Khan death

By

Published : Apr 29, 2020, 3:43 PM IST

ನವದೆಹಲಿ: ಬಾಲಿವುಡ್​ನ ಪ್ರತಿಭಾವಂತ ನಟ ಇರ್ಫಾನ್​ ಖಾನ್​ ತಮ್ಮ 53ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಅವರ ಸಾವಿಗೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದಾರೆ.

ಇರ್ಫಾನ್​ ಖಾನ್​ ಸಾವು ವಿಶ್ವ ಸಿನಿಮಾ ಜಗತ್ತು ಹಾಗೂ ರಂಗಭೂಮಿಗೆ ತುಂಬಲಾರದ ನಷ್ಟ. ವಿವಿಧ ಮಾಧ್ಯಮಗಳಲ್ಲಿ ಅವರ ನಿರ್ವಹಿಸಿರುವ ಪಾತ್ರದಿಂದ ಎಲ್ಲರ ಮನದಲ್ಲೂ ನೆಲೆಸಿದ್ದು, ಅವರ ಕುಟುಂಬಕ್ಕೆ ಸಾವು ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್​ ಮಾಡಿದ್ದಾರೆ.

ಉಳಿದಂತೆ ಕಮಲ್​ ಹಾಸನ್​,ಕರಿನಾ ಕಪೂರ್​, ಅಮೀರ್ ಖಾನ್​,ಪ್ರಿಯಾಂಕಾ ಚೋಪ್ರಾ,ಅಮಿತಾಬ್​ ಬಚ್ಚನ್​ ಸೇರಿದಂತೆ ಅನೇಕರು ಕಂಬನಿ ಮಿಡಿದು ಟ್ವೀಟ್ ಮಾಡಿದ್ದಾರೆ. ಕ್ರಿಕೆಟಿಗರಾದ ಸಚಿನ್​ ತೆಂಡೂಲ್ಕರ್​ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ ಸೇರಿದಂತೆ ಅನೇಕ ಕ್ರಿಕೆಟಿಗರು ಇರ್ಫಾನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ವಿವಿಧ ಪಕ್ಷದ ನಾಯಕರೂ ನಟನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​,ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ, ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಹಾಗೂ ಕಾಂಗ್ರೆಸ್​​ ಮುಖಂಡ ರಾಹುಲ್​ ಗಾಂಧಿ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details