ಕರ್ನಾಟಕ

karnataka

By

Published : Feb 6, 2021, 3:38 PM IST

ETV Bharat / sitara

ಪ್ರತಿಭಟನಾನಿರತ ರೈತರಿಂದ ಬಾಬಿ ಡಿಯೋಲ್​ರ​​ 'ಲವ್ ಹಾಸ್ಟೆಲ್' ಚಿತ್ರೀಕರಣ ಸ್ಥಗಿತ

ಕೇಂದ್ರ ಸರ್ಕಾರದೊಂದಿಗಿನ ತಮ್ಮ ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಬಾಲಿವುಡ್ ಸೆಲೆಬ್ರಿಟಿಗಳಿಗೆ ಪಂಜಾಬ್‌ನಲ್ಲಿ ಶೂಟಿಂಗ್​​ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಾನಿರತ ರೈತರು ಹೇಳಿದ್ದಾರೆ.

Bobby Deol
ಬಾಬಿ ಡಿಯೋಲ್

ಪಟಿಯಾಲ(ಪಂಜಾಬ್​)​: ಪಟಿಯಾಲದಲ್ಲಿ ನಡೆಯುತ್ತಿದ್ದ ಬಾಲಿವುಡ್​ ನಟ ಬಾಬಿ ಡಿಯೋಲ್​ರ​​ 'ಲವ್ ಹಾಸ್ಟೆಲ್' ಚಿತ್ರೀಕರಣವನ್ನು ಪ್ರತಿಭಟನಾನಿರತ ರೈತರು ಸ್ಥಗಿತಗೊಳಿಸಿದ್ದಾರೆ.

ಬಾಬಿ ಡಿಯೋಲ್​ರ ಸಹೋದರ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್​​, ಕೇಂದ್ರದ ಕೃಷಿ ಕಾನೂನುಗಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಇದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲವ್ ಹಾಸ್ಟೆಲ್ ತಂಡವನ್ನು ಶೂಟಿಂಗ್​ ಸ್ಥಳದಿಂದ ತೆರವುಗೊಳಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಎಂಟ್ರಿಯಾದಾಗ ಸ್ಕ್ರೀನ್​​ಗೆ ಆರತಿ ಎತ್ತಿ, ಕುಂಬಳಕಾಯಿ ಹೊಡೆದ ಅಭಿಮಾನಿಗಳು

ಕೆಲವು ದಿನಗಳ ಹಿಂದೆ, ಜಾನ್ವಿ ಕಪೂರ್ ಅಭಿನಯದ 'ಗುಡ್ ಲಕ್ ಜೆರ್ರಿ' ಸಿನಿಮಾ ಚಿತ್ರೀಕರಣವನ್ನು ರೈತರು ನಿಲ್ಲಿಸಿದ್ದರು. ಕೇಂದ್ರ ಸರ್ಕಾರದೊಂದಿಗಿನ ತಮ್ಮ ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಬಾಲಿವುಡ್ ಸೆಲೆಬ್ರಿಟಿಗಳಿಗೆ ಪಂಜಾಬ್‌ನಲ್ಲಿ ಶೂಟಿಂಗ್​​ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ABOUT THE AUTHOR

...view details