ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟಿ, ನರ್ತಕಿ ನೋರಾ ಫತೇಹಿ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿಮಾನಿಗಳು ಬಡ ಮಕ್ಕಳಿಗೆ ಸಹಾಯ ಹಸ್ತ ಚಾಚಿದ್ದಾರೆ. ನಟಿಯು ಇತ್ತೀಚೆಗೆ (ಫೆಬ್ರವರಿ 6 ರಂದು) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಈ ರೀತಿಯಾಗಿ ಅಭಿಮಾನ ಮೆರೆದಿದ್ದಾರೆ.
ನಟಿಯ ಅಭಿಮಾನಿಗಳು ಭಾರತದಲ್ಲಿ 300 ಹಿಂದುಳಿದ ಬಡ ಮಕ್ಕಳಿಗೆ ಆಹಾರ ನೀಡಿ ಹಸಿವು ನೀಗಿಸಿದ್ದಾರೆ. ದುಬೈನಲ್ಲಿ ತಮ್ಮ ರಜಾ ದಿನಗಳನ್ನು ಎಂಜಾಯ್ ಮಾಡಿದ ನರ್ತಕಿ ನೋರಾ ಇಂದು ಬಳಗ್ಗೆ ಭಾರತಕ್ಕೆ ಬಂದಿಳಿದಿದ್ದಾರೆ. ಇಂದು ಬೆಳಗ್ಗೆ ದುಬೈನಿಂದ ಹಿಂತಿರುಗಿದ ದಿಲ್ಬರ್ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ಇನ್‌ಸ್ಟಾಗ್ರಾಮ್ ಅಭಿಮಾನಿಗಳ ಅಭಿಮಾನ್ ಬಗ್ಗೆ ಬರೆದುಕೊಂಡಿರುವ ಅವರು ಕಣ್ಣೀರು ಸುರಿಸಿದ್ದಾರೆ. ಆರು ಅಭಿಮಾನಿ ಕ್ಲಬ್‌ಗಳು ಒಟ್ಟಾಗಿ ಬಡ ಮಕ್ಕಳಿಗೆ ಆಹಾರದ ಪೊಟ್ಟಣ ನೀಡುವ ಮೂಲಕ ಮಾದರಿಯಾಗಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ಗುರುತಿಸಿದ ನೋರಾ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಶಿಲ್ಪಾ ಶೆಟ್ಟಿ ನಿರೂಪಣೆ ಕಾರ್ಯಕ್ರಮದಲ್ಲಿ ಶೆಹನಾಜ್ ಗಿಲ್ ಅತಿಥಿ.. ಫೋಟೋ ವೈರಲ್
ಇದು ಈ ದಿನದ ಅತ್ಯುತ್ತಮ ಕೊಡುಗೆಯಾಗಿದೆ, ನನ್ನ ಹೆಸರಿನಲ್ಲಿ ಅನೇಕ ಹಿಂದುಳಿದ ಮಕ್ಕಳಿಗೆ ಆಹಾರ ನೀಡಿದ ನನ್ನ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು, ನನ್ನ ಅಭಿಮಾನಿಗಳು ಉದಾರ ಚಿಂತನೆಯುಳ್ಳವರಾಗಿದ್ದಾರೆ, ಒಳ್ಳೆಯ ಹೃದಯವಂತರು, ಈ ಅದ್ಭುತ ಮತ್ತು ಅಮೂಲ್ಯವಾದ ಕೊಡುಗೆಗೆ ಧನ್ಯವಾದಗಳು, ದೇವರು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ.