ಮುಂಬೈ:ಬಾಲಿವುಡ್ ಸಿನಿಮಾ ಕೂಲಿ ನಂ.1 ಚಿತ್ರೀಕರಣದ ವೇಳೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಶೂಟಿಂಗ್ ಸ್ಪಾಟ್ನಲ್ಲಿ ಭಾರಿ ಅಗ್ನಿ ಅವಘಡ..! - ಶೂಟಿಂಗ್ ಸೆಟ್ನಲ್ಲಿ ಅಗ್ನಿ ಅವಘಢ
ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿರುವ ಕೂಲಿ ನಂ.1 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ವರುಣ್ ಧವನ್ ತಂದೆ ಡೇವಿಡ್ ಧವನ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಕೂಲಿ ನಂ.1
ಬಾಲಿವುಡ್ ನಟ ಹಾಗೂ ಕೂಲಿ ನಂ.1 ನಿರ್ಮಾಪಕ ಜಾಕಿ ಭಗ್ನಾನಿ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ಶೀಘ್ರವಾಗಿ ಬೆಂಕಿಯನ್ನು ನಂದಿಸಿರುವುದಕ್ಕೆ ಆಗ್ನಿಶಾಮಕ ದಳ ಹಾಗೂ ಸಹಕಾರ ನೀಡಿದ ಮುಂಬೈ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿರುವ ಕೂಲಿ ನಂ.1 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ವರುಣ್ ಧವನ್ ತಂದೆ ಡೇವಿಡ್ ಧವನ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. 2020ರ ಮೇ ಒಂದರಂದು ಈ ಚಿತ್ರ ಬಿಡುಗಡೆಯಾಗಲಿದೆ.