ಕರ್ನಾಟಕ

karnataka

ETV Bharat / sitara

ಬಾಲಿವುಡ್​ನಲ್ಲಿ ಮಗದೊಂದು ಹೈಪ್ರೊಫೈಲ್ ಮದುವೆ; ಇದು ಸುಳ್ಳಾಗಲು ಸಾಧ್ಯವೇ? - ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್ ಮದುವೆ ಸಿದ್ಧತೆ

ಬಾಲಿವುಡ್​ನ ತಾರಾ ಜೋಡಿ ಹಸೆಮಣೆ ಏರುವುದು ಪಕ್ಕಾ ಆಗಿದೆ. ರಾಜಸ್ಥಾನದ ಹಲವು ಐಷಾರಾಮಿ ಹೋಟೆಲ್​ಗಳನ್ನು ಕಾಯ್ದಿರಿಸಲಾಗಿದ್ದು, ಈ ಮೂಲಕ ತಮ್ಮ ಮದುವೆ ಬಗ್ಗೆ ಹಬ್ಬಿದ್ದ ವದಂತಿಗೆ ಶೀಘ್ರದಲ್ಲೇ ತೆರೆ ಎಳೆಯಲಿದ್ದಾರೆ.

Katrina Kaif-Vicky Kaushal wedding: Six Senses Fort Barwara completely booked
Katrina Kaif-Vicky Kaushal wedding: Six Senses Fort Barwara completely booked

By

Published : Dec 1, 2021, 7:22 PM IST

ಮುಂಬೈ (ಮಹಾರಾಷ್ಟ್ರ):ಬಾಲಿವುಡ್‌ನ ನಟಿ ಕತ್ರಿನಾ ಕೈಫ್‌ ಮತ್ತು ನಟ ವಿಕ್ಕಿ ಕೌಶಲ್ ಡೇಟಿಂಗ್​ ವಿಚಾರ ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಅವರಿಬ್ಬರು ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದ್ದು,ಇದಕ್ಕಾಗೇ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

ಬಾಲಿವುಡ್​ನ ತಾರಾ ಜೋಡಿ

ಹಸೆಮಣೆ ಏರುವ ತುದಿಗಾಲ ಮೇಲೆ ನಿಂತಿರುವ ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್ ಸದ್ಯ ರಾಜಸ್ಥಾನದಲ್ಲಿದ್ದು, ತಮ್ಮ ಮದುವೆಗಾಗಿ ಇಲ್ಲಿನ ಹಲವು ಐಷಾರಾಮಿ ಹೋಟೆಲ್​ಗಳನ್ನು ಬುಕ್​ ಮಾಡಿದ್ದಾರೆ ಎನ್ನಲಾಗುತ್ತಿದೆ.

ಡಿಸೆಂಬರ್ 7ರಿಂದ 9ವರೆಗೆ ಈ ತಾರಾ ಜೋಡಿಯ ಮದುವೆ ನಡೆಯಲಿದ್ದು, ಇಲ್ಲಿನ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾ ಸೇರಿದಂತೆ ಐಷಾರಾಮಿ ಹೋಟೆಲ್​ಗಳನ್ನು ಸಂಪೂರ್ಣವಾಗಿ ಕಾಯ್ದಿರಿಸಿದ್ದಾರಂತೆ. ಹೈಪ್ರೊಫೈಲ್ ಮದುವೆ ಆಗಿದ್ದರಿಂದ ಮುಂಚಿತವಾಗಿಯೇ ಬುಕ್​ ಮಾಡಲಾಗಿದೆಯಂತೆ.

ಬಾಲಿವುಡ್​ನ ತಾರಾ ಜೋಡಿ

ಆದರೆ, ಮದುವೆಗಾಗಿ ಸಕಲ ಸಿದ್ಧತೆ ನಡೆಯುತ್ತಿದ್ದರೂ ವಿಕ್ಕಿ ಮತ್ತು ಕತ್ರಿನಾ ಮಾತ್ರ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಈ ಸಿದ್ಧತೆಯಿಂದ ಅವರು ಹಸೆಮಣೆ ಏರುವುದು ಪಕ್ಕಾ ಎಂದು ಜಾಲತಾಣದಲ್ಲಿ ಸುದ್ದಿ ಜೋರಾಗಿದೆ.

ಕೊಠಡಿಗಳ ಲಭ್ಯತೆಯ ಬಗ್ಗೆ ಮಾಧ್ಯಮಗಳು ವಿಚಾರಿಸಿದಾಗ 'ನಾವು ಡಿಸೆಂಬರ್ 5 ರಿಂದ ಡಿಸೆಂಬರ್ 11 ರವರೆಗೆ ಸಂಪೂರ್ಣವಾಗಿ ಕಾಯ್ದಿರಿಸಿದ್ದೇವೆ. ಡಿಸೆಂಬರ್ 12 ರ ನಂತರ ಕೊಠಡಿಗಳನ್ನು ಬುಕ್ ಮಾಡಬಹುದು' ಎಂದು ಹೋಟೆಲ್‌ನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಬಾಲಿವುಡ್​ನ ತಾರಾ ಜೋಡಿ

ಇದನ್ನೂ ಓದಿ: ಕುಟುಂಬದಿಂದ, ಪತಿಯಿಂದ ದೂರವಿರುವುದು ಬಹಳ ಕಠಿಣ.. ನಟಿ ಪ್ರಿಯಾಂಕಾ ಚೋಪ್ರಾ

ABOUT THE AUTHOR

...view details