ಕರ್ನಾಟಕ

karnataka

ETV Bharat / sitara

ಬಾಯ್​ ಹೇಳುವ ಮುನ್ನ ಪ್ರೀತಿಯ ಅಪ್ಪುಗೆ​: ಮತ್ತೆ ಅಭಿಮಾನಿಗಳ ಮನಗೆದ್ದ ವಿಕ್ಕಿ- ಕತ್ರಿನಾ - ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ

ಕಳೆದ ಡಿಸೆಂಬರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮುಂಬೈನ ನಿವಾಸದಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡರು. ಶನಿವಾರ ವಿಕ್ಕಿ ಚಿತ್ರೀಕರಣಕ್ಕೆ ತೆರಳಿದ್ದು, ಈ ಸಂದರ್ಭದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ವಿಕ್ಕಿ- ಕತ್ರಿನಾ
ವಿಕ್ಕಿ- ಕತ್ರಿನಾ

By

Published : Jan 3, 2022, 7:40 AM IST

ಮುಂಬೈ: ಬಾಲಿವುಡ್​ ಸ್ಟಾರ್​ ಜೋಡಿಯಾದ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ತಮ್ಮ ನಡೆ - ನುಡಿಗಳಿಂದ ಎಲ್ಲರ ಮನ ಗೆಲ್ಲುತ್ತಿದ್ದಾರೆ.

ಹೊಸ ವರ್ಷಾಚರಣೆಯನ್ನು ಮುಂಬೈನಲ್ಲೇ ಆಚರಿಸಿದ ಈ ಜೋಡಿ, ಹೊಸ ವರ್ಷದ ದಿನ ಇಬ್ಬರೂ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಈ ವೇಳೆ, ಇವರಿಬ್ಬರ ನಡುವಿನ ಪ್ರೀತಿ ನೋಡಿದ ಅಭಿಮಾನಿಗಳು ಮಾರು ಹೋಗಿದ್ದಾರೆ.

ಮುಂಬೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡ ವಿಕ್ಕಿ- ಕತ್ರಿನಾ

ಓದಿ:ಹೊಸವರ್ಷಕ್ಕೆ ಸಿಹಿ ಸುದ್ದಿ ಹಂಚಿಕೊಂಡ ಸಂಜನಾ ಗಲ್ರಾನಿ: ಶೀಘ್ರದಲ್ಲೇ ಮನೆಗೆ ಹೊಸ ಅತಿಥಿ ಆಗಮನ

ಹೌದು, ಹೊಸ ವರ್ಷದ ದಿನ ಶನಿವಾರ ರಾತ್ರಿ ವಿಕ್ಕಿ- ಕತ್ರಿನಾ ಮುಂಬೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ಕಿ ಅವರನ್ನು ಡ್ರಾಪ್ ಮಾಡಲು ಸ್ವತಃ ಕತ್ರಿನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇಬ್ಬರೂ ತಮ್ಮ ಕಾರಿನಿಂದ ಹೊರಡುವ ಮುನ್ನ ಪ್ರೀತಿಯ ಅಪ್ಪುಗೆ ಕೊಟ್ಟು, ತಾತ್ಕಾಲಿಕ ವಿದಾಯ ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳ ಮನಗೆದ್ದಿದೆ.

ಕೋವಿಡ್​ ವೈರಸ್​ ಆತಂಕ ಉಂಟಾಗಿರುವ ಹಿನ್ನೆಲೆ ಕತ್ರಿನಾ ಮಾಸ್ಕ್​ ಧರಿಸಿ, ಕಿತ್ತಳೆ ಬಣ್ಣದ ನೈಟ್‌ಸೂಟ್​ನಲ್ಲಿ ಮಿಂಚಿದರು. ವಿಕ್ಕಿ ಡೆನಿಮ್ ಜೀನ್ಸ್ ಜೊತೆಗೆ ಕಂದು ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದರು.

ABOUT THE AUTHOR

...view details