ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಹಿರಿಯ ಮಗ ಇಬ್ರಾಹಿಂ ಅಲಿ ಖಾನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 21ನೇ ವಸಂತಕ್ಕೆ ಕಾಲಿಟ್ಟ ಇಬ್ರಾಹಿಂಗೆ ಬಾಲಿವುಡ್ ದಿವಾ ಕರೀನಾ ಕಪೂರ್ ಖಾನ್ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ಅವರೊಂದಿಗೆ ಇಬ್ರಾಹಿಂ ಇಬ್ರಾಹಿಂ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿರುವ ಕರೀನಾ, ಪತಿ ಸೈಫ್ ಮತ್ತು ಇಬ್ರಾಹಿಂ ಅವರ ಅಮೂಲ್ಯವಾದ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆಕರ್ಷಕ ಕ್ಯಾಪ್ಶನ್ ಹಾಕಿದ್ದಾರೆ. ಸ್ವೀಟೆಸ್ಟ್ ಮೋಸ್ಟ್ ಗಾರ್ಜಿಯಸ್ ಇಗ್ಗಿ ಎಂಬ ಶೀರ್ಷಿಕೆ ಬರೆದು ಟ್ಯಾಗ್ ಮಾಡಿದ್ದಾರೆ.
ಕರೀನಾ ಕಪೂರ್ ಅವರೊಂದಿಗೆ ಇಬ್ರಾಹಿಂ ಇಬ್ರಾಹಿಂ ಮತ್ತು ತಂದೆ ಸೈಫ್ ಅವರ ಹಳೆಯ ಫೋಟೋ ಇದಾಗಿದ್ದು, ಕರೀನಾ ಹಂಚಿಕೊಂಡಿರುವ ಪೋಸ್ಟ್ ನೋಡಿದ ನೆಟಿಜನ್ಸ್ ಇದೊಂದು ಹೆಮ್ಮೆಪಡುವ ಕುಟುಂಬ ಎಂದು ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್ನ ನಟ/ನಟಿಯರು ಯಂಗ್ಸ್ಟಾರ್ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಇಬ್ರಾಹಿಂ ಅಲಿ ಖಾನ್ ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಅವರ ಮಗ. ಸದ್ಯ ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದು, ಕ್ಯಾಮರಾ ಮುಂದೆ ಬರುವ ಮುನ್ನವೇ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾನೆ. ಸಹೋದರಿಯಾಗಿರುವ ನಟಿ ಸಾರಾ ಅಲಿ ಖಾನ್ ಅವರೊಂದಿಗೆನ ಹಲವು ಫೋಟೋಗಳು ವೈರಲ್ ಆಗಿವೆ.