ನವದೆಹಲಿ: ಗಾಯಕಿ ಕನಿಕಾ ಕಪೂರ್ ಅವರಿಗೆ ಈ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಈ ಬಳಿಕ ಮಾಧ್ಯಮಗಳಲ್ಲಿ ಅಪಹಾಸ್ಯಕ್ಕೊಳಗಾದ ಮತ್ತು ಆನ್‌ಲೈನ್‌ನಲ್ಲಿ ಟ್ರೋಲ್ ಮಾಡಿದ ಅನುಭವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
"ಅದು ಕಠಿಣ ಸಮಯ. ಎಲ್ಲಕ್ಕಿಂತ ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ಜನರು ಪರಿಸ್ಥಿತಿಯ ವಾಸ್ತವತೆ ತಿಳಿಯದೇ ಏನೇನು ಹೇಳುತ್ತಾರೆ" ಎಂದು ಕನಿಕಾ ಹೇಳಿದರು.
ಕಳೆದ ವರ್ಷ ಗಾಯಕಿ - ಗೀತರಚನೆಕಾರ್ತಿ ಕನಿಕಾ ಲಂಡನ್ನಿಂದ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ, ಕ್ವಾರಂಟೈನ್ಗೆ ಒಳಗಾಗುವ ಬದಲು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ವರದಿಯಾಗಿದೆ. ತನ್ನ ಪ್ರಯಾಣದ ಇತಿಹಾಸವನ್ನು ಬಹಿರಂಗಪಡಿಸದ ಕಾರಣಕ್ಕಾಗಿ ಅವರು ಈ ಆರೋಪಿವನ್ನು ಎದುರಿಸಿದ್ದರು. ಬಳಿಕ ಉತ್ತರ ಪ್ರದೇಶ ಸರ್ಕಾರವು ಪ್ರಕರಣ ದಾಖಲಿಸಿತ್ತು.
"ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ತಿಳಿದಿದ್ದರೂ ಜನರು ತುಂಬಾ ಕೆಟ್ಟದಾಗಿರಲು ಬಯಸುತ್ತಾರೆ ಎಂದು ನೋಡಿದಾಗ ನಿಜವಾಗಿಯೂ ದುಃಖವಾಯಿತು. ಇದು ನಿಜವಾಗಿಯೂ ತುಂಬಾ ಕೆಟ್ಟದ್ದು ಎಂದು ಭಾವಿಸುತ್ತೇನೆ" ಎಂದು ಅವರು ಹೇಳುತ್ತಾರೆ.
"ಜನರು ಏನು ಹೇಳುತ್ತಾರೆ ಮತ್ತು ಅವರ ಹೇಳಿಕೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ಸಾಂಕ್ರಾಮಿಕದ ನಂತರ, ಅವರೆಲ್ಲರೂ ಉತ್ತಮ ದೃಷ್ಟಿಕೋನವನ್ನು ಪಡೆಯುತ್ತಾರೆ ಮತ್ತು ಹೆಚ್ಚು ತಿಳಿವಳಿಕೆ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಕನಿಕಾ ಹೇಳುವ ಪ್ರಕಾರ, ಕೊರೊನಾ ಕಲಾವಿದರ ಮೇಲೆ ಹೆಚ್ಚು ಪ್ರಭಾವ ಬೀರಿದೆ.
"ದೈನಂದಿನ ಆದಾಯವಿಲ್ಲದ ಕಾರಣ ಇದು ತುಂಬಾ ಕಠಿಣವಾಗಿತ್ತು. ನಮ್ಮ ಸಂಗೀತದ ಎಲ್ಲ ಹಕ್ಕುಗಳು ಸಂಗೀತ ಕಂಪನಿಯೊಂದರಲ್ಲಿದೆ ಎಂಬ ಅಂಶದ ಬಗ್ಗೆ ಇದು ಯೋಚಿಸುವಂತೆ ಮಾಡಿತು. ಸಂಗೀತಗಾರರು ಕೆಲಸ ಪ್ರಾರಂಭಿಸುವ ಸಮಯ ಇದು ಎಂದು ನಾನು ಭಾವಿಸುತ್ತೇನೆ" ಎಂದು ಕನಿಕಾ ಹೇಳುತ್ತಾರೆ.