ಮುಂಬೈ: ಬಿಎಂಸಿ ಅಧಿಕಾರಿಗಳು ತನ್ನ ಮುಂಬೈ ಕಚೇರಿಯ ಮೇಲೆ ದಾಳಿ ನಡೆಸಿದ ಬಳಿಕ, ನಟಿ ಕಂಗನಾ ರಣಾವತ್ "ಮೂವಿ ಮಾಫಿಯಾ" ನನ್ನನ್ನು ಇಲ್ಲಿಗೆ ಕೊನೆಗೊಳಿಸಿದರೆ, ನಾನು ಬೇರೆಲ್ಲಿಯಾದರೂ ಮೇಲೇರುತ್ತೇನೆ. ಮತ್ತು ಈ ಅಂತ್ಯವು ನನ್ನ ಹೊಸ ಆರಂಭವಾಗಿರುತ್ತದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
"ನೀವು ನಿಮ್ಮ ಸ್ನೇಹಿತರನ್ನು ಬಳಸಿಕೊಂಡು ನನ್ನನ್ನು ಕೆಳಗಿಳಿಸಲು ನೋಡಬಹುದು, ಇದು ನಿಮಗೆ ಕ್ಷಣಿಕ ಸಂತೋಷವನ್ನು ನೀಡುತ್ತದೆ. ಆದರೆ ನೀವು ಬುದ್ಧಿವಂತರಾಗಿದ್ದರೆ ನನ್ನ ಅಂತ್ಯವು ನನ್ನ ಹೊಸ ಪ್ರಾರಂಭವೆಂದು ತಿಳಿಯಬೇಕು" ಎಂದು ಅವರು ಟ್ವೀಟ್ ಮಾಡಿದ್ದಾರೆ.
"ನೀವು ನನ್ನನ್ನು ಇಲ್ಲಿಗೆ ಕೊನೆಗೊಳಿಸಿದರೆ ನಾನು ಬೇರೆಲ್ಲಿಯಾದರೂ ಏರುತ್ತೇನೆ. ಅದು ನಿಮಗೆ ಇನ್ನಷ್ಟು ನೋವುಂಟು ಮಾಡುತ್ತದೆ" ಎಂದು ಕಂಗನಾ ಎಚ್ಚರಿಸಿದ್ದಾರೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಅಧಿಕಾರಿಗಳು ಮುಂಬೈನಲ್ಲಿರುವ ತಮ್ಮ ಕಚೇರಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡಿದ್ದು, ನೆರೆಹೊರೆಯವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.
ಅಗತ್ಯ ಮುನ್ಸೂಚನೆಯಿಲ್ಲದೆ ಮಹಾನಗರ ಪಾಲಿಕೆಯ ಸದಸ್ಯರು ತಮ್ಮ ಕಚೇರಿಗೆ ಪ್ರವೇಶಿಸಿದ್ದಾರೆ ಎಂದು ಹೇಳಿಕೊಂಡಿರುವ ಅವರು, "ನನ್ನ ಬಳಿ ಎಲ್ಲಾ ದಾಖಲೆಗಳಿವೆ, ಬಿಎಂಸಿ ಅನುಮತಿಗಳಿವೆ. ನಾನು ನನ್ನ ಆಸ್ತಿಯಲ್ಲಿ ಅಕ್ರಮವಾಗಿ ಏನೂ ಮಾಡಿಲ್ಲ, ಬಿಎಂಸಿ ಅಧಿಕಾರಿಗಳು ನೋಟಿಸ್ ನೀಡದೆ ನನ್ನ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.